ಬೆಂಗಳೂರು: ಭ್ರಷ್ಟಾಚಾರದ ಗಂಭೀರ ಆರೋಪ ಎದುರಿಸುತ್ತಿರುವ ಕೇಸರಿಪಡೆ ನಾಯಕರನ್ನ ಕಟ್ಟಿಹಾಕಲು ತಂತ್ರಗಾರಿಕೆ ಹೆಣೆಯಲಾಗುತ್ತಿದೆ. ಸಂಸದ ಡಾ.ಕೆ ಸುಧಾಕರ್, ಪ್ರತಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಹಲವರ ವಿರುದ್ಧ ಭ್ರಷ್ಟಾಚಾರದ ಪ್ರಕರಣಗಳು ಇದ್ದು, ತಮ್ಮ ವಿರುದ್ಧದ ಪ್ರಕರಣಗಳಿಗೆ ಕೋರ್ಟ್ ನಲ್ಲಿ ಬಿಜೆಪಿ ಮುಖಂಡರು ತಡೆಯಾಜ್ಞೆ ತಂದಿದ್ದಾರೆ.
ಇದೀಗ ಬಿಜೆಪಿ ನಾಯಕರು ತಂದಿರುವ ತಡೆಯಾಜ್ಞೆ ತೆರವಿಗೆ ಮುಂದಾಗಿರುವ ಕಾಂಗ್ರೆಸ್ ಈ ಸಂಬಂಧ ಹೆಸರಾಂತ ವಕೀಲರಾದ ಕಪಿಲ್ ಸಿಬಲ್, ಅಭಿಷೇಕ್ ಮನುಸಿಂಘ್ವಿ ಜೊತೆ ಸುಧೀರ್ಘ ಸಮಾಲೋಚನೆ ನಡೆಸಿದೆ.ಇಬ್ಬರೂ ಹಿರಿಯ ವಕೀಲರ ಜೊತೆ ಮಹತ್ವದ ಚರ್ಚೆ ನಡೆಸಿರುವ ಸಿಎಂ ಸಿದ್ದರಾಮಯ್ಯ ಆದಷ್ಟು ಬೇಗ ಬಿಜೆಪಿ ನಾಯಕರ ವಿರುದ್ಧದ ಪ್ರಕರಣಗಳ ತಡೆಯಾಜ್ಞೆ ತೆರವುಗೊಳಿಸುವುದು.
ನಂತರ ಮುಂದೆ ಏನು ಮಾಡಬೇಕೆಂಬ ಕುರಿತು ಚರ್ಚೆ ಒಂದೊಂದು ಪ್ರಕರಣಕ್ಕೂ ಒಬ್ಬೊಬ್ಬ ವಕೀಲರನ್ನ ನೇಮಿಸುವ ಕುರಿತೂ ಚರ್ಚೆ ನಡೆಸಿದ್ದು, ಇದೇ ವೇಳೆ ರಾಜ್ಯಪಾಲರ ನಡೆ ಹಾಗೂ ಕಾನೂನು ಹೋರಾಟದ ಬಗ್ಗೆಯೂ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.