ಚನ್ನರಾಯಪಟ್ಟಣ: ದೇವನಹಳ್ಳಿ ತಾಲೂಕಿನಲ್ಲಿ ಬಿಜೆಪಿ ಪಕ್ಷ ಬಲವರ್ಧನೆ ಆಗಬೇಕೆಂದರೆ ಬೂತ್ ಮಟ್ಟದಿಂದ ಸದಸ್ಯತ್ವ ನೋಂದಾವಣೆಯಾಗಬೇಕು ಎಂದು ಬಿಜೆಪಿಮುಖಂಡ ನಾರಾಯಣಗೌಡ ಹೇಳಿದರು.
ದೇವನಹಳ್ಳಿ ತಾಲೂಕು ಪಾಪನಹಳ್ಳಿ ಗ್ರಾಮದಲ್ಲಿ ಬಿಜೆಪಿ ಪಕ್ಷದ ಸದಸ್ಯತ್ವ ನೊಂದಾವಣಿಯಲ್ಲಿ ಮಾತನಾಡಿ ತಾಲೂಕು ಮಟ್ಟದಲ್ಲಿ ಬಿಜೆಪಿ ಪಕ್ಷ ಕಟ್ಟಿಗೊಳಿಸಬೇಕಾದರೆ ಬೂತ್ ಮಟ್ಟದಿಂದ ಹೆಚ್ಚು ಸದಸ್ಯತ್ವ ನೊಂದಾವಣೆಯಾದರೆ ಮುಂಬರುವ ಚುನಾವಣೆಗಳಲ್ಲಿ ಪಕ್ಷ ಅಧಿಕಾರಕ್ಕೆ ಬರುತ್ತದೆ ಈಗಾಗಲೇ ಕೇಂದ್ರ ಪ್ರಧಾನಿ ನರೇಂದ್ರ ಮೋದಿಯವರು ರೈತರಿಗೆ ಕಿಸಾನ್ ಸಮಾನ್ ಯೋಜನೆ ಅಣ್ಣ ಅವರ ಖಾತೆಗೆ ಆಗುತ್ತಿದ್ದಾರೆ.
ವಿಕಾಸಿತ ಭಾರತ ಅಭಿವೃದ್ಧಿ ಆಗುತ್ತಿದೆ ಪ್ರತಿ ಬೂತ್ ಮಟ್ಟದಿಂದ ಹೆಚ್ಚು ಸದಸ್ಯತ್ವ ನೊಂದಾವಣೆ ಆದರೆ ತಾಲೂಕಿನಲ್ಲಿ ಸದಸ್ಯತ್ವ ಹೆಚ್ಚಾಗಲು ಕಾರಣವಾಗುತ್ತದೆ ಮೊಬೈಲ್ ಆಪ್ ನ ಮುಖಾಂತರ ನೊಂದಾವಣಿ ಮಾಡಲಾಗುತ್ತಿದೆ ಪ್ರತಿ ಬೂತ್ ಮಟ್ಟದಲ್ಲೂ ಭೇಟಿ ನೀಡಿ ಕಾರ್ಯಕರ್ತರ ನೊಂದಾವಣೆ ಆಗಬೇಕು ಎಂದರು
ಈ ಸಂದರ್ಭದಲ್ಲಿ ಚನ್ನರಾಯಪಟ್ಟಣ ಹೋಬಳಿ ಬಿಜೆಪಿ ಅಧ್ಯಕ್ಷ ಪ್ರಕಾಶ್ ಗ್ರಾಪಂ ಮಾಜಿ ಅಧ್ಯಕ್ಷ ಕದರಪ್ಪ ಬಿಜೆಪಿ ಮುಖಂಡರುಗಳಾದ ಸುಬ್ರಮಣಿ ರವಿ ರಮೇಶ್ ನಾರಾಯಣಸ್ವಾಮಿ ಇನ್ನು ಮುಂತಾದವರು ಹಾಜರಿದ್ದರು.