ನೆಲಮಂಗಲ: ನಮ್ಮ ಜನಪ್ರಿಯ ದಕ್ಷ ಪ್ರಾಮಾಣಿಕ ನೂತನ ಸಂಸದರಾದ ಡಾ.ಕೆ.ಸುಧಾಕರ್ ರವರಿಗೆ ಸನ್ಮಾನಿಸಿ, ಅಭಿನಂದಿಸುವ ಕಾರ್ಯಕ್ರಮವನ್ನು 07-07-2024 ರಂದು ಬಾನುವಾರ ಏರ್ಪಡಿಸಲಾಗಿದೆ ಎಂದು ಭಾರತೀಯ ಜನತಾ ಪಕ್ಷದ ತಾಲ್ಲೂಕು ಅಧ್ಯಕ್ಷರಾದ ಜಗದೀಶ್ ಚೌದರಿ ತಿಳಿಸಿದರು.
ತಾಲ್ಲೂಕಿನ ಅಂಚಿಪುರ ಗ್ರಾಮದ ಮಾಜಿ ಶಾಸಕರಾದ ಶ್ರೀನಿವಾಸಮೂರ್ತಿರವರ ತೋಟದ ಮನೆಯಲ್ಲಿ ನಡೆದ ಪೂರ್ವಬಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ನಮ್ಮ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಇದ್ದರೂ ಸಹ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಮುಖಂಡರುಗಳ ವಿರೋದವನ್ನು ಕಟ್ಟಿಕ್ಕೊಂಡು ಲೋಕ ಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಪುರದ ಲೋಕ ಸಭಾ ಕ್ಷೇತ್ರದ ಎನ್ ಡಿ ಎ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ರವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಲು ಭಾರತೀಯ ಜನತಾ ಪಕ್ಷ ಮತ್ತು ಜ್ಯಾತ್ಯಾತೀತ ಜನತಾದಳ ಪಕ್ಷಗಳ ಮುಖಂಡರುಗಳು ಮತ್ತು ಕಾರ್ಯಕರ್ತರುಗಳ ಶ್ರಮವನ್ನು ನಾನು ಎಂದೆಂದಿಗೂ ಮರೆಯಲು ಸಾಧ್ಯವೇ ಇಲ್ಲ.
ಹಾಗಾಗಿ ನೂತನ ಸಂಸದರಾದ ಡಾ.ಕೆ.ಸುಧಾಕರ್ ರವರಿಗೆ ಸನ್ಮಾನಿಸಿ ಹಾಗೂ ಕ್ಷೆತ್ರದ ಜನತೆಗೆ, ಅಭಿನಂದಿಸುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಈ ಸಂದರ್ಭದಲ್ಲಿ ಬೂತ್ ಮಟ್ಟದ ಕಾರ್ಯಕರ್ತರುಗಳನ್ನು ಕರೆತರುವ ಪ್ರಾಮಾಣಿಕ ಕೆಲಸವಾಗಬೇಕು ಅಭಿನಂದನಾ ಸಮಾರಂಭದಲ್ಲಿ ಎರಡು ಪಕ್ಷಗಳ ಯುವಮೋರ್ಚಾಗಳ ಪದಾಧಿಕಾರಿಗಳು, ಕಾರ್ಯಕರ್ತರುಗಳು ಮತ್ತು ಎರಡು ಪಕ್ಷಗಳ ಮಹಿಳಾ ಮೋರ್ಚಾದ ಕಾರ್ಯಕರ್ತರುಗಳು ಮತ್ತು ಮುಖಂಡರುಗಳು ಶ್ರಮವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೂಳಿಸಬೇಕೆಂದರು.
ಲೋಕ ಸಭಾ ಚುನಾವಣೆಯಲ್ಲಿ ಪ್ರದಾನ ಮಂತ್ರಿ ನರೇಂದ್ರ ಮೋದಿ ಅವರ ಮತ್ತು ಮಾಜಿ ಪ್ರಧಾನಿ ದೇವೇಗೌಡ ರವರುಗಳ ನೇತೃತ್ವದಲ್ಲಿ ಚುನಾವಣೆಯನ್ನು ಎರಡು ಪಕ್ಷಗಳ ಮುಖಂಡರುಗಳ ಮತ್ತು ಕಾರ್ಯಕರ್ತರ ಪರಿಶ್ರಮದಿಂದ ಎದುರಿಸಿ ಜಯಶಾಲಿಯಾದುದು ಸ್ಮರಣಿಯವಾದುದು. ಮುಂದಿನ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮತ್ತು ಸಹಕಾರ ಸಂಘಗಳ ಚುನಾವಣೆಗಳಲ್ಲೂ ಎರಡು ಪಕ್ಷಗಳ ಮುಖಂಡರುಗಳು ಮತ್ತು ಕಾರ್ಯಕರ್ತರು ಒಗ್ಗಟ್ಟಾಗಿ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯತಿಯ ಎಲ್ಲಾ ಸ್ಥಾನಗಳನ್ನು ಗೆದ್ದು ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸಬೇಕೆಂದು ತಿಳಿಸಿದರು.
ಮಾಜಿ ಶಾಸಕರಾದ ಡಾ.ಶ್ರೀನಿವಾಸಮೂರ್ತಿರವರು ಮಾತನಾಡಿ ಸದನದಲ್ಲಿ ರಮೇಶ್ ಕುಮಾರ್ ರವರ ಬಾಷಣವನ್ನು ಪ್ರಸ್ತಾಪಿಸಿ ದೇವಾಲಯವನ್ನು ಕಟ್ಟುವವರು ಒಳಗಿರುತ್ತಾರೆ. ದೇವಸ್ಥಾನವನ್ನು ಉದ್ಘಾಟಿಸುವ ಸಂದರ್ಭದಲ್ಲಿ ಕಟ್ಟಿದವರು ಹೊರಗಡೆ ಇರುತ್ತಾರೆ. ಹಾಗಾಗಿ ಸಂಸತ್ ಸದಸ್ಯರಾದ ಕೆ.ಸುಧಾಕರ್ ರವರಿಗೆ ಸನ್ಮಾನಿಸಿ ಮತ್ತು ಅಭಿನಂದಿಸುವ ಕಾರ್ಯಕ್ರಮದ ಸಂದರ್ಭದಲ್ಲಿ ಎರಡು ಪಕ್ಷಗಳ ಮುಖಂಡರುಗಳು ತಾಳ್ಮೆಯಿಂದ ವೇದಿಕೆಯಲ್ಲಿ ಯಾವುದೇ ಅಶಿಸ್ತುಗಳಿಗೆ ಅವಕಾಶ ನೀಡದೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲರೂ ಶ್ರಮಿಸಬೇಕು. ಈ ಕಾರ್ಯಕ್ರಮದ ಹೊಣೆಯನ್ನು ಹೊತ್ತಿರುವ ಜಗದೀಶ್ ಚೌದರಿರವರ ಶ್ರಮ ಅಸ್ಟಿಟ್ಟಲ್ಲ.
ಆದ್ದರಿಂದ ನಾವೆಲ್ಲ ಅವರ ಕೈ ಬಲಪಡಿಸಬೇಕು ಯಲಹಂಕ ಕ್ಷೇತ್ರ ಬಿಟ್ಟರೆ ನಮ್ಮ ಕ್ಷೇತ್ರದಿಂದ ಹೆಚ್ಚು ಮತಗಳನ್ನು ನೀಡಿ ಕೆ.ಸುಧಾಕರ್ ರವರನ್ನು ಗೆಲ್ಲಿಸಿದ್ದೇವೆ. ಹಾಗಾಗಿ ಕ್ಷೇತ್ರದ ಮತದಾರರಿಗೆ ನಾವು ಎಂದೆಂದೂ ಕೃತಜ್ಞಾನ ಬಾವವನ್ನು ತೋರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.ಮುಂದಿನ ದಿನಗಳಲ್ಲಿ ಶಿವಗಂಗೆ ಬೆಟ್ಟದಲ್ಲೂ ರೋಪ್ ವೆ, ಇ.ಎಸ್. ಐ.ಆಸ್ಪತ್ರೆ, ಶಾಶ್ವತ ನೀರಾವರಿ ವ್ಯವಸ್ಥೆ, ಮೆಟ್ರೋ ಸೇವೆ – ಮೊದಲಾದ ಕೆಲಸಕಾರ್ಯಗಳಿಗೆ ಎರಡು ಪಕ್ಷಗಳ ಮುಖಂಡರುಗಳು ಸಂಸತ್ ಸದಸ್ಯರಾದ ಡಾ.ಕೆ.ಸುಧಾಕರ್ ರವರಿಗೆ ಮನವಿಗಳನ್ನು ಸಲ್ಲಿಸುವುದು ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷರಾದ ತಿಮ್ಮರಾಯಪ್ಪ, ಬೈರೇಗೌಡ, ಬಿಜೆಪಿ ಪಕ್ಷದ ಮಹಿಳಾ ಮೋರ್ಚಾ ಅಧ್ಯಕ್ಷ ರಾದ ಶ್ರೀಮತಿ ಮಂಜುಳಾ ಸುರೇಶ್, ತಾಲ್ಲೂಕು ಜೆಡಿಎಸ್ ಮಹಿಳಾ ಅಧ್ಯಕ್ಷೆ ಶ್ರೀಮತಿ ಲೀಲಾ ಕುಮಾರ್, ಕಾರ್ಯಾಧ್ಯಕ್ಷ ಬುದಾಳ್ ರಾಜು, ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ರಾದ ಸುನಿಲ್, ಸದಸ್ಯರಾದ ಶಿವಕುಮಾರ್, ಗಣೇಶ್, ಅಂಜನಮೂರ್ತಿ, ಆಂಜಿನಪ್ಪ, ಶ್ರೀಮತಿ ಪೂರ್ಣಿಮಾ ಸುಗ್ಗರಾಜ್, ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರ್ಷ, ತಾಲ್ಲೂಕು ಎಸ್ಟಿ ಮೋರ್ಚಾ ಅಧ್ಯಕ್ಷ ಕೆಂಪರಾಮಯ್ಯ, ಬಿಜೆಪಿ ಮಹಿಳಾ ಮೋರ್ಚಾ ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ಸೌಮ್ಯ, ಸುರೇಶ್, ಹಿರಿಯ ನಾಯಕಿ ರಾಜಮ್ಮ ಪ್ರಕಾಶ್, ಡಿ.ಸಿದ್ದರಾಜು, ಯುವ ಮುಖಂಡ ಗಿರಿಧರ, ಪ್ರಕಾಶ್, ಒಳಗೊಂಡಂತೆ ಎರಡು ಪಕ್ಷಗಳ ಮುಖಂಡರುಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.



