ಬೆಳಗಾವಿ: ನಿನ್ನೆ ರಾತ್ರಿ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ವಿರುದ್ಧ ಹಲವು ಶಾಸಕರು ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿರುವ ಘಟನೆ ನಡೆದಿದೆ.ಶಾಸಕಾಂಗ ಪಕ್ಷದ ಸಭೆಯಲ್ಲಿ ಕೋರ್ ಕಮಿಟಿ ಸದಸ್ಯರನ್ನು ಪುನಾರಾಯ್ಕೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆದಿದೆ.
ಕೋರ್ ಕಮಿಟಿಯಲ್ಲಿ ನಾಲ್ಕು ಮಂದಿಯನ್ನು ಗೆಲ್ಲಿಸುವ ಶಕ್ತಿ ಚೈತನ್ಯ ಇರುವವರಿಗೆ ಅವಕಾಶ ಕೊಡಬೇಕು ಎಂದು ಒತ್ತಾಯಿಸಲಾಗಿದೆ. ಅವರೇ ಗೆಲ್ಲಲು ಸಾಮಥ್ರ್ಯವಿಲ್ಲದೇ ವ್ಯಕ್ತಿಗಳಿಗೆ ಕೋರ್ ಕಮಿಟಿಯಲ್ಲಿ ಸ್ಥಾನವೇಕೆ? ಎಂಬ ಪ್ರಶ್ನೆ ಉದ್ಭವವಾಗಿದೆ ಎಂದು ಹೇಳಲಾಗಿದೆ.ಈ ಪ್ರಶ್ನೆ ಪ್ರಸ್ತಾಪಿಸಿದ ತಕ್ಷಣವೇ ಇಡೀ ಸಭೆಗೆ ಅರ್ಥವಾಗಿದ್ದು, ಆ ವ್ಯಕ್ತಿ ಬೇರಾರು ಅಲ್ಲ. ಬಿ.ಶ್ರೀರಾಮುಲು ಎನ್ನುವುದು ಎಲ್ಲರ ಗಮನಕ್ಕೆ ಬಂದಿದೆ.
2023 ರ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಬಿ.ಶ್ರೀರಾಮುಲು ಹೀನಾಯವಾಗಿ ಸೋಲು ಕಂಡಿದ್ದರು. ಬಳಿಕ 2024 ರ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದ ಅಭ್ಯರ್ಥಿಯಾಗಿ ಸೋಲು ಅನುಭವಿಸಿದ್ದರು. ಇತ್ತೀಚೆಗೆ ನಡೆದ ಸಂಡೂರು ವಿಧಾನಸಭಾ ಚುನಾವಣೆಯ ಜವಾಬ್ದಾರಿ ಹೊತ್ತಿದ್ರೂ ಅಭ್ಯರ್ಥಿಗೆ ಹಿನ್ನಡೆ ಉಂಟಾಗಿದೆ. ಈ ಮೂಲಕ ರಾಮುಲು ಅವರೇ ಗೆಲ್ಲಲು ಅಸಾಧ್ಯ ಎಂದು ಬಿಜೆಪಿ ಶಾಸಕರು ಬಹುತೇಕ ಮಂದಿ ರಾಮುಲು ವಿರುದ್ಧ ತೀವ್ರ ಅಸಮಾಧಾನ ಹೊರ ಹಾಕಿರುವುದು ತಿಳಿದುಬಂದಿದೆ.