ದೇವನಹಳ್ಳಿ : ಗ್ರಾ.ಪಂ. ಅಧ್ಯಕ್ಷರಾಗಿದ್ದ ಜಿ.ಎಸ್. ಮಹದೇವ್ ರಾಜೀನಾಮೆಯಿಂದ ತೆರವಾಗಿದ್ದ ತಾಲ್ಲೂಕಿನ ಬಿಜ್ಜವಾರ ಗ್ರಾಮ ಪಂಚಾಯ್ತಿ ಅಧ್ಯಕ್ಷರ ಚುನಾವಣೆ ನಡೆದು ಸಾಮಾನ್ಯ ಅಧ್ಯಕ್ಷ ಸ್ಥಾನ ನಿಗದಿಪಡಿಸಲಾಗಿದ್ದು ಅಧ್ಯಕ್ಷ ಸ್ಥಾನಕ್ಕೆ ಬಿ.ಜಿ.ರಾಮಸ್ವಾಮಿ, ಮಾತ್ರ ನಾಮಪತ್ರ ಸಲ್ಲಿಸಿದ್ದು ಯಾರೂ ನಾಮಪತ್ರ ಸಲ್ಲಿಸದ ಕಾರಣ ಇವರನ್ನು ಅಧ್ಯಕ್ಷರನ್ನಾಗಿ ಘೋಷಣೆ ಮಾಡುತ್ತಿದ್ದೇನೆ ಎಂದು ಚುನಾವಣಾಧಿಕಾರಿ ಆರ್.ಎಸ್. ನಾಗೇಂದ್ರಬಾಬು ತಿಳಿಸಿದರು.
12 ಸದಸ್ಯ ಬಲ ಹೊಂದಿರುವ ಪಂಚಾಯತಿಯಲ್ಲಿ 6ಜನ ಜೆಡಿಎಸ್ ಬೆಂಬಲಿತ ಸದಸ್ಯರಿದ್ದು, ಕಾಂಗ್ರೆಸ್ ಬೆಂಬಲಿತ 5ಜನ ಹಾಗೂ 1 ಪಕ್ಷೇತರ ಸದಸ್ಯರಿದ್ದು ಒಬ್ಬ ಸದಸ್ಯರನ್ನು ಹೊರೆತುಪಡಿಸಿ 11 ಜನ ಸದಸ್ಯರು ಬಿ.ಜಿ. ರಾಮಸ್ವಾಮಿ ಪರ ಮತ ಚಲಾಯಿಸಿದ್ದರಿಂದ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ನೂತನ ಅಧ್ಯಕ್ಷ ಬಿ.ಜಿ. ರಾಮಸ್ವಾಮಿ ಮಾತನಾಡಿ, ಗ್ರಾಮ ಪಂಚಾಯತಿ ವ್ಯಾಪ್ತಿಯಎಲ್ಲಾ ಗ್ರಾಮಗಳಿಗೂ ಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಪ್ರಮುಖವಾಗಿ ಶುದ್ದ ಕುಡಿಯುವ ನೀರು ಗ್ರಾಮಗಳ ಸ್ವಚ್ಚತೆಗೆ ಪ್ರಾಶಸ್ತ್ಯ ನೀಡಲಾಗುವುದು ಪಕ್ಷಾತೀತವಾಗಿ ಎಲ್ಲಾ ಸದಸ್ಯರ ಸಹಕಾರ ಪಡೆದು ಪಂಚಾಯತಿ ಅಭಿವೃದ್ದಿಗೆ ಶ್ರಮಿಸುತ್ತೇನೆ ಮುಖ್ಯವಾಗಿ ಪಂಚಾಯಿತಿಗೆ ತೆರಿಗೆ ಪಾವತಿಯಾಗುವುದು ಮುಖ್ಯವಾಗುತ್ತದೆ. ಆದ್ದರಿಂದ ಸಾರ್ವಜನಿಕರು ಕಾಲ ಕಾಲಕ್ಕೆ ಪಂಚಾಯಿತಿಗೆ ತೆರಿಗೆ ಕಟ್ಟಬೇಕು.
ಪಂಚಾಯಿತಿಯಿಂದ ಸಿಗುವಂತಹ ಸೌಲತ್ತುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಪಕ್ಷಬೇಧ ಮರೆತು ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲಾ ಸದಸ್ಯರಿಗೆ ಕೃತಜ್ಞತೆಗಳು ಎಂದು ತಿಳಿಸಿದರು.ಈ ಸಮಯದಲ್ಲಿ ಹಿರಿಯ ಮುಖಂಡರಾದ ಜಿ.ಎಸ್. ಭೀಮರಾಜ್ ಮಾತನಾಡಿ ನನ್ನ ತಮ್ಮ ಮಹದೇವ್ ಅಧ್ಯಕ್ಷನಾಗಿದ್ದು ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ರಾಮಸ್ವಾಮಿಯವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದರೆ ಅವರಿಗೆ ಧವ್ಯವಾದಗಳನ್ನು ತಿಳಿಸುತ್ತೇನೆ, ಬಿಜ್ಜವಾರ ಗ್ರಾಮ ಪಂಚಾಯ್ತಿಯನ್ನು ಮಾದರಿ ಪಂಚಾಯ್ತಿ ಮಾಡಲು ಅಧ್ಯಕ್ಷರ, ಸದಸ್ಯರ ಹಾಗೂ ಅಧಿಕಾರಿಗಳ ಸಹಕಾರ ಅಗತ್ಯ, ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳ ಚರಂಡಿ, ರಸ್ತೆಗಳ ಅಭಿವೃದ್ದಿ ಮಾಡಿ ಹಲವಾರು ಕಾರ್ಯಕ್ರಮ ರೂಪಿಸಲಿ, ಎಂದರು.
ರೈಲ್ವೆ ಇಲಾಖೆಯಿಂದ ಬೂಸ್ವಾಧಿನ ಕೈಬಿಡಿ. ಇತ್ತೀಚೆಗೆ ನಮ್ಮ ಗ್ರಾಮಗಳ ಆಸುಪಾಸಿನಲ್ಲಿ ರೈಲ್ವೆ ಇಲಾಖೆಯಿಂದ ಜಮೀನು ಸ್ವಾಧಿನಪಡಿಸಿಕೊಳ್ಳಲು ಸೋಟಿಪಿಕೇಷನ್ ಮಾಡಿರುವುದು ಸರಿಯಾದ ಕ್ರಮವಲ್ಲ, ಅನೇಕ ಜನ ಸಣ್ಣಪುಟ್ಟ ರೈತರೇ ಉಳುಮೆ ಮಾಡಿ ಜೀವನ ಸಾಗಿಸುತ್ತಿದ್ದಾರೆ, 1ಎಕರೆ, ಅರ್ದ ಎಕರೆ ಜಂಇನು ಹೊಂದಿರುವವರೇ ಹೆಚ್ಚು ಅಂತಹವರ ಬಾಯಿಗೆ ಮಣ್ಣು ಹಾಕಬೇಡಿ ಎಂದು ಭೀಮರಾಜ್ ಸರ್ಕಾರಗಳಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಕೆ. ಆರತಿ, ಸದಸ್ಯರಾದ ಭಾಗ್ಯ, ಜಯಮ್ಮ, ಹೆಚ್.ಅಂಬಿಕಾ ಅಶೋಕ್, ಕೃಷ್ಣಪ್ಪ, ಎನ್.ರಾಮು, ಹೆಚ್.ಎಂ. ಮುನೇಗೌಡ, ಪೂರ್ಣಿಮಾ, ಜಿ.ಎಸ್.ಮಹದೇವಪ್ಪ, ಮಧುಶ್ರೀ, ಪಿ.ಡಿ.ಓ ಸತೀಶ್ಕುಮಾರ್ ಗೋಣೂರು ಅಶೋಕ್ಕುಮಾರ್, ಪ್ರಭಾಕರ್, ಮಧು, ಆನಂದ್ರಾಮಸ್ವಾಮಿ, ವೀರಪ್ಪ ನಾರಾಯಣಸ್ವಾಮಿ ಉಪಸ್ಥಿತರಿದ್ದು ನೂತನ ಅಧ್ಯಕ್ಷರಿಗೆ ಶುಭ ಕೋರಿದರು.