ದೇವನಹಳ್ಳಿ :ತಾಲ್ಲೂಕಿನ ಬಿದಲಪುರ ಗ್ರಾಮದಲ್ಲಿ ಶ್ರೀ ದ್ರೌಪದಿ ಧರ್ಮರಾಯಸ್ವಾಮಿ ದೇವಾಲಯದ ಪ್ರತಿಷ್ಠಾಪನೆ ಉದ್ಘಾಟನಾ ಸಮಾರಂಭವು ಅದ್ದೂರಿಯಾಗಿ ನಡೆಯಿತು.
ಸದ್ಗುರು ಶ್ರೀ ಬಾಲಯೋಗಿ ಸಾಯಿ ಮಂಜುನಾಥ್ ಮಹಾರಾಜ್ ಶ್ರೀಗಳ ಹಾಗೂ ಜಗದ್ಗುರುಶ್ರೀ ಪ್ರಣವಾನಂದಪುರಿ ಮಹಾಸ್ವಾಮೀಜಿಗಳ ಸಾನಿಧ್ಯದಲ್ಲಿ ಯಶಸ್ವಿಯಾಗಿ ನೆರವೇರಿತು.
ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷರುಹಾಗೂ ಕನ್ನಡ ಚಲನ ಚಿತ್ರದ ನಾಯಕ ನಟನಿಖಿಲ್ ಕುಮಾರಸ್ವಾಮಿ ಭಾಗಿಯಾಗಿ ತಾಯಿ
ದ್ರೌಪದಿಯ ಆರ್ಶೀವಾದ ಪಡೆದು ನಂತರ ಮಾತನಾಡಿ ತಾಯಿಯ ಆಶೀರ್ವಾದ ಗ್ರಾಮದ ಎಲ್ಲಾ ಜನತೆಯ ಮೇಲಿರಲಿ ಕಾಲಕಾಲಕ್ಕೆ ಮಳೆ ಬೆಳೆಯಾಗಿ ಸಮೃದ್ಧಿಯಾಗಿರಲಿ ಎಂದು ಹಾರೈಸಿ ನಮ್ಮ ತಂದೆ ಮತ್ತು ನನ್ನನ್ನು ನಂಬಿ ಮತಗಳನ್ನು ನೀಡಿದ ಮತದಾರರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ತಂದಡಯೊಂದಿಗೆ ನಾನು ಸದಾ ಸಿದ್ದನಾಗಿರುತ್ತೇನೆ ಎಂದು ಹೇಳಿದರು.
ಶ್ರೀ ದ್ರೌಪದಿ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನ ಸೇವಾ ಸಮಿತಿಯ ಮುಖಂಡ ರಾದ ಶ್ರೀನಿವಾಸ್ ಮಾತನಾಡಿ ಎಲ್ಲಾ ದಾನಿಗಳ ತನು ದನ ಮನ ನೀಡಿ ಸಹಕರಿಸಿದ ಪರಿಣಾಮ ಇಷ್ಟು ಅಚ್ಚುಕಟ್ಟಾದ ತಾಯಿಯ ದೇವಾಲಯ ನಿರ್ಮಾಣ ಮಾಡಲು ಸಾಧ್ಯವಾಗಿದೆ ಆ ತಾಯಿಯ ಅನುಗ್ರಹ ಎಲ್ಲರ ಮೇಲೆ ಇದ್ದು ಒಳ್ಳೆಯದಾಗಲಿ ಎಂದರು.
ಬಿದಲಪುರ ಗ್ರಾಮದ ಮುಖಂಡರಾದ ಶಿವಕುಮಾರ್ ಆರಾಧ್ಯ ಮತ್ತು ಅನಿಲ್ ಕುಮಾರ್ ಮಾತನಾಡಿದರು.ಇದೇ ಸಂದರ್ಭದಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ, ಮಾಜಿ ಎಂಎಲ್ ಸಿ ಪಿ.ಆರ್ ರಮೇಶ್, ಮಾಜಿ ಶಾಸಕರಾದ ಜಿ. ಚಂದ್ರಣ್ಣ, ಕರ್ನಾಟಕ ರಾಜ್ಯ ತಿ (ವ ಕ್ಷ )ಸಂಘದ ಅಧ್ಯಕ್ಷ ಮು ಕೃಷ್ಣಮೂರ್ತಿ, ಬಿಗ್ ಬಾಸ್ ಖ್ಯಾತಿಯ ವರ್ತೂರು ಸಂತೋಷ್, ಉಪಾಧ್ಯಕ್ಷರಾದ ವೈ.ಎನ್. ಶಾಮಣ್ಣ ಹಾಗೂವೈ.ವಿ. ಮುನಿರಾಜು, ಸಂಘಟನಾ ಕಾರ್ಯದರ್ಶಿ ಜೆ ಆರ್ ಮುನಿವೀರಣ್ಣ, ನಿರ್ದೇಶಕರಾದ
ಎನ್ ಕನಕರಾಜು, ಉಪ್ಪಾರಹಳ್ಳಿಯ ಪುಟ್ಟರಾಜು,ಕೋನಘಟ್ಟದ ಕೆ.ಎಂ. ಮಂಜುನಾಥ್, ತಾಲ್ಲೂಕು ಸಂಘದ ಅಧ್ಯಕ್ಷ ವಿ ಗೋಪಾಲಕೃಷ್ಣ, ಹೊರಮಾವು ರಾಮಚಂದ್ರಣ್ಣ, ಪಿಎಲ್ ಡಿ
ಬ್ಯಾಂಕಿನ ಲಾಯರ್ ಮುನಿರಾಜು, ಬಾಲೆಪುರದಲಕ್ಷ್ಮೀನಾರಾಯಣಪ್ಪ, ಹೊಸಳ್ಳಿ.ಟಿ. ರವಿ, ವಿಜಯಪುರ, ದೇವನಹಳ್ಳಿ, ಹೊಸಕೋಟೆ, ಬೂದಿಗೆರೆಯ ಮುಖಂಡರು, ಸುತ್ತ -ಮುತ್ತ
ಲಿನ ಊರುಗಳ ಮುಖಂಡರು, ದೇವಾಲಯದ ಸೇವಾ ಸಮಿತಿಯ ಪದಾಧಿಕಾರಿಗಳು, ಕುಲಬಾಂಧವರು, ಗ್ರಾಮಸ್ಥರು ಮತ್ತು ಭಕ್ತಾಧಿಗಳು ಭಾಗಿಯಾಗಿದ್ದರು.