ಬೆಂಗಳೂರು: ರಾಜ್ಯದಲ್ಲಿ ಬಿಪಿಎಲ್ ಕಾರ್ಡಗಳನ್ನು ಎಪಿಎಲ್ಗೆ ಬದಲಾವಣೆ ಮಾಡುತ್ತಿರುವ ವಿಚಾರಕ್ಕೆ ಸಂಬಂಧಪಟ್ಟಂತೆಇಂದು ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ ಮುಖಂಡರು ರದ್ದಾದವರ ಅಳಲು ಆಲಿಸಿದ್ದಾರೆ.
ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಶಾಸಕರಾದ ಡಾ.ಸಿ.ಎನ್. ಅಶ್ವತ್ಥ್ನಾರಾಯಣ್ ಹಾಗೂ ಕೆ.ಗೋಪಾಲಯ್ಯರಿಂದ ಬಿಪಿಎಲ್ ಕಾರ್ಡುದಾರರ ನಿವಾಸಗಳಿಗೆ ಭೇಟಿ ನೀಡಿ ಅವರ ಸಮಸ್ಯೆ ಕೇಳಿ ಸಾಂತ್ವನ ಹೇಳಿದ್ದಾರೆ.ಜೊತೆಗೆ ಕೆಲ ಬಡ ಕುಟುಂಬಗಳು ಬಿಪಿಎಲ್ ಕಾರ್ಡ್ ಕಳೆದುಕೊಳ್ಳುತ್ತಿರುವುದು. ಯಾರ್ಯಾರು ಬಿಪಿಎಲ್ ಕಾರ್ಡ್ ಕಳೆದುಕೊಂಡಿದ್ದಾರೋ ಹಾಗೂ ಬಿಪಿಎಲ್ ಕಾರ್ಡ್ನಿಂದ ಎಪಿಎಲ್ಗೆ ಕಾರ್ಡ್ ಬದಲಾವಣೆ ಆಗಿದ್ಯೋ? ಅಂತಹವರ ನಿವಾಸಕ್ಕೆ ಭೇಟಿ ಕೊಟ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಬೆಳಿಗ್ಗೆ 11 ಘಂಟೆಗೆ ಮಹಾಲಕ್ಷ್ಮಿಪುರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ವೃಷಭಾ ವತಿನಗರ, ಜೈ ಮಾರುತಿನಗರ ಹಾಗೂ ನಂದಿನಿಲೇಔಟ್ನಲ್ಲಿ ನಾಯಕರ ಸಂಚಾರ ಮಾಡಿ ಮನೆ ಮನೆಯವರ ಕುಂದುಕೊರತೆ ಆಲಿಸಿದ್ದಾರೆ.