ಲಾಹೋರ್: ಕ್ರಿಕೆಟನ್ನು ವೃತ್ತಿಪರತೆಯೊಂದಿಗೆ ಹೇಗೆ ಮುನ್ನಡೆಸಿಕೊಂಡು ಹೋಗಬೇಕು ಎಂಬುದನ್ನು ಪಾಕಿಸ್ಥಾನ ಕ್ರಿಕೆಟ್ ಮಂಡಳಿ ಬಿಸಿಸಿಯನ್ನು ನೋಡಿ ಕಲಿಯಬೇಕು ಎಂದಿದ್ದಾರೆ, ಪಾಕ್ ಮಾಜಿ ವಿಕೆಟ್ ಕೀಪರ್ ಕಮ್ರಾನ್ ಅಕ್ಮಲ್.
`ಬಿಸಿಸಿಐನ ವೃತ್ತಿಪರತೆ, ಅವರ ಆಯ್ಕೆ ಮಂಡಳಿ, ನಾಯಕ ಮತ್ತು ತರಬೇತುದಾರರು’ ಇವರೆಲ್ಲ ಸೇರಿಕೊಂಡು ತಂಡವನ್ನು ನಂಬರ್ ವನ್ ಪಟ್ಟಕ್ಕೆ ಏರಿಸಿದ್ದಾರೆ.
ನಾವೂ ಇದೇ ಎತ್ತರ ತಲುಪಬೇಕಾದರೆ ಪಾಕಿಸ್ಥಾನ ಕ್ರಿಕೆಟ್ ಮಂಡಳಿ ಬಿಸಿಸಿಐನ್ನು ಮಾದರಿಯಾಗಿರಿಸಿಕೊಂಡು ಕೆಲಸ ಮಾಡಬೇಕಿದೆ’ ಎಂದು ಕಮ್ರಾನ್ ಅಕ್ಮಲ್ ತಮ್ಮ ಯೂ ಟ್ಯೂಬ್ ಚಾನೆಲ್ನಲ್ಲಿ ಹೇಳಿದರು. ಇದೇ ವೇಳೆ, `ನಿಮ್ಮ ಅಹಂಕಾರದಿಂದಲೇ ಪಾಕಿಸ್ಥಾನ ಕ್ರಿಕೆಟ್ ಸಂಕಟಕ್ಕೆ ಸಿಲುಕಿದೆ’ ಎಂದು ಪಿಸಿಬಿಯನ್ನು ನೇರವಾಗಿ ತರಾಟೆಗೆ ತೆಗೆದುಕೊಂಡರು.