ದೇವಜಿತ್ ಸೈಕಿಯಾ ಸೈಕಿಯಾ ಅಸ್ಸಾಂ ತಂಡದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್. ಪ್ರಥಮ ದರ್ಜೆಯಲ್ಲಿ 4 ಪಂದ್ಯಗಳನ್ನಾಡಿದ್ದ ಅವರು ಒಟ್ಟು 53 ರನ್ ಕಲೆಹಾಕಿದ್ದಾರೆ. ಇದೀಗ ಭಾರತೀಯ ಕ್ರಿಕೆಟ್ ಮಂಡಳಿಯ ಹಂಗಾಮಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಭಾರತೀಯ ಕ್ರಿಕೆಟ್ ಮಂಡಳಿಯ (ಬಿಸಿಸಿಐ) ಹಂಗಾಮಿ ಕಾರ್ಯದರ್ಶಿಯಾಗಿ ದೇವಜಿತ್ ಸೈಕಿಯಾ ಆಯ್ಕೆಯಾಗಿದ್ದಾರೆ. ಜಯ್ ಶಾ ಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ತೆರವಾಗಿದ್ದ ಈ ಹುದ್ದೆಗೆ ಸೈಕಿಯಾ ಅವರನ್ನು ನೇಮಿಸಲಾಗಿದೆ. ಅಸ್ಸಾಂ ಮೂಲದ ಸೈಕಿಯಾ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ. ಪ್ರಸ್ತುತ ಅವರು ಬಿಸಿಸಿಐ ಜಂಟಿ ಕಾರ್ಯದರ್ಶಿಯಾಗಿದ್ದಾರೆ.
ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರು ತಮ್ಮ ಸಾಂವಿಧಾನಿಕ ಅಧಿಕಾರವನ್ನು ಬಳಸಿಕೊಂಡು, ಬಿಸಿಸಿಐ ಸಂವಿಧಾನದ ಷರತ್ತು 7(1) (ಡಿ) ನಿಯಮದಡಿಯಲ್ಲಿ ದೇವಜಿತ್ ಸೈಕಿಯಾ ಅವರನ್ನು ಹಂಗಾಮಿ ಕಾರ್ಯದರ್ಶಿಯಾನ್ನಾಗಿ ಆಯ್ಕೆ ಮಾಡಿದ್ದಾರೆ.ಬಿಸಿಸಿಐನ ಖಾಲಿ ಹುದ್ದೆ ಅಥವಾ ಅನಾರೋಗ್ಯದ ಸಂದರ್ಭದಲ್ಲಿ ಇನ್ನೊಬ್ಬ ಪದಾಧಿಕಾರಿಯನ್ನು ನಿಯೋಜಿಸಿಕೊಳ್ಳಲು ಬಿಸಿಸಿಐ ಅಧ್ಯಕ್ಷರಿಗೆ ಅಧಿಕಾರವಿದೆ. ಈ ಅಧಿಕಾರದಂತೆ ಯಾವುದೇ ಚುನಾವಣೆಯಿಲ್ಲದೆ, ರೋಜರ್ ಬಿನ್ನಿ ಅವರು ಸೈಕಿಯಾ ಅವರನ್ನು ಆಯ್ಕೆ ಮಾಡಿದ್ದಾರೆ.