ಮಂಗಳೂರು: ಬೀಚ್ಗೆ ಪ್ರವಾಸಕ್ಕೆ ಬಂದಿದ್ದ ಮೂವರು ವ್ಯಕ್ತಿಗಳು ಸಮುದ್ರಪಾಲಾಗಿರುವಂತಹ ಘಟನೆ ಮಂಗಳೂರಿನ ಕುಳಾಯಿ ಬಳಿಯ ಹೊಸಬೆಟ್ಟು ಬೀಚ್ ಬಳಿ ನಡೆದಿದೆ. ಚಿತ್ರದುರ್ಗದ ಮಂಜುನಾಥ್, ಶಿವಮೊಗ್ಗದ ಶಿವಕುಮಾರ್ ಮತ್ತು ಬೆಂಗಳೂರಿನ ಸತ್ಯವೇಲು ಮೃತರು. ಬೀದರ್ನ ಪರಮೇಶ್ವರ್ನನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.