ಭಾರತ ತಂಡದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಹೊರಗುಳಿದಿದ್ದರು. ಬೆನ್ನು ನೋವಿನ ಸಮಸ್ಯೆ ಕಾರಣ ಐಸಿಸಿ ಟೂರ್ನಿಗೆ ಅಲಭ್ಯರಾಗಿದ್ದ ಬುಮ್ರಾ ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ನ (IPL) ಆರಂಭಿಕ ಪಂದ್ಯಗಳಲ್ಲೂ ಕಾಣಿಸಿಕೊಳ್ಳುವುದಿಲ್ಲ ಎಂದು ತಿಳಿದು ಬಂದಿದೆ.
2025ರ ಚಾಂಪಿಯನ್ಸ್ ಟ್ರೋಫಿಯಲ್ಲೂ ಬುಮ್ರಾ ಕಾಣಿಸಿಕೊಂಡಿರಲಿಲ್ಲ. ಕಾರಣ ಅದೇ ಬೆನ್ನು ನೋವಿನ ಸಮಸ್ಯೆ. ಹೀಗೆ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಬುಮ್ರಾಗೆ ಇದೀಗ ವೃತ್ತಿಜೀವನ ಕೊನೆಗೊಳ್ಳುವ ಭೀತಿ ಎದುರಾಗಿದೆ. ಏಕೆಂದರೆ ಇಂತಹದ್ದೇ ಸಮಸ್ಯೆಗೆ ಒಳಗಾಗಿದ್ದ ನ್ಯೂಝಿಲೆಂಡ್ನ ವೇಗಿ ಶೇನ್ ಬಾಂಡ್ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ಕ್ರಿಕೆಟ್ ಕೆರಿಯರ್ಗೆ ವಿದಾಯ ಹೇಳಿದ್ದರು.