ರಕ್ಷಣಾ ಆಟಗಾರರು ಸ್ಥಿರ ಪ್ರದರ್ಶನ ನೀಡಿದರೂ ಸಹ ರೈಡರ್ಗಳು ಅಂಕಗಳನ್ನು ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದರಿಂದ ಬೆಂಗಳುರು ಬುಲ್ಸ್ 11ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ ಮತ್ತೊಂದು ಸೋಲು ಕಂಡಿದೆ. ಮಂಗಳವಾರ ನಡೆದ 64ನೇ ಪಂದ್ಯದಲ್ಲಿ ಬೆಂಗಳೂರು 31-54 ಅಂಕಗಳಿಂದ ಪಾಟ್ನಾ ಪೈರೇಟ್ಸ್ ವಿರುದ್ಧ ಭಾರೀ ಅಂತರದ ಸೋಲು ಕಂಡಿದೆ.
ಈ ಮೂಲಕ ಬೆಂಗಳೂರು ಬುಲ್ಸ್ ಅಂಕ ಪಟ್ಟಿಯಲ್ಲಿ ಮೇಲೆಳುವ ಆಸೆಗೆ ಪೆಟ್ಟು ಬಿದ್ದಿದೆ.ಮೊದಲಾವಧಿಯ ಆರಂಭದಿಂದಲೂ ಪಾಟ್ನಾ ಪಂದ್ಯದ ಮೇಲೆ ಹಿಡಿತ ಸಾಧಿಸುತ್ತಾ ಸಾಗಿತು. ಈ ವೇಳೆ ಬುಲ್ಸ್ ಅಂಕಗಳನ್ನು ಕಲೆ ಹಾಕುವಲ್ಲಿ ಹಿಂದೆ ಬಿದ್ದಿತು. ಬೆಂಗಳೂರು ತಂಡದ ರೈಡರ್ಗಳು ಆಕ್ರಮಣಕಾರಿ ಆಟವನ್ನು ಆಡಲಿಲ್ಲ. ಮೊದಲಾವಧಿಯಲ್ಲಿ ಬೆಂಗಳೂರು ಕೇವಲ 2 ಅಂಕಗಳನ್ನು ಮಾತ್ರ ಕಲೆ ಹಾಕಿತು, ಈ ವೇಳೆ ರಕ್ಷಣಾ ವಿಭಾಗದ ಆಟ ಮನಮೋಹಕವಾಗಿತ್ತು. ಈ ವೇಳೆಯ 13ನೇ ನಿಮಿಷದಲ್ಲಿ ಬೆಂಗಳೂರು ಒಮ್ಮೆ ಆಲೌಟ್ ಆಯಿತು. ಮೊದಲ 20 ನಿಮಿಷದಲ್ಲಿ ಪಾಟ್ನಾ 20-13 ಅಂಕಗಳಿಂದ ಮುನ್ನಡೆ ಸಾಧಿಸಿತು.
ಎರಡನೇ ಅವಧಿಯ ಆಟದಲ್ಲಿ ಪಾಟ್ನಾ ಸಹ 34-18 ಅಂಕಗಳಿಂದ ಮುನ್ನಡೆ ಸಾಧಿಸಿ ಸುಲಭ ಜಯ ಸಾಧಿಸಿತು. ಪರಾಜಿತ ತಂಡದ ಪರ ದೇವಾಂಕ್ 16, ಅಯಾನ್ 12 ಅಂಕಗಳನ್ನು ಕಲೆ ಹಾಕಿ ಮಿಂಚಿದರು.ಯು.ಪಿ, ಪುಣೇರಿ ಪಂದ್ಯ ಟೈಮೊದಲ ಪಂದ್ಯದಲ್ಲಿ ಪುಣೇರಿ ಹಾಗೂ ಯುಪಿ ಯೋಧಾಸ್ ತಂಡಗಳು ಅಮೋಘ ಪ್ರದರ್ಶನವನ್ನು ನೀಡಿದ್ದು, ಅಂಕಗಳನ್ನು ಹಂಚಿಕೊಂಡಿವೆ.
ಪ್ರಸಕ್ತ ಆವೃತ್ತಿಯ 63ನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ ಹಾಗೂ ಯುಪಿ ಯೋಧಾಸ್ ತಂಡಗಳು ತಲಾ 29 ಅಂಕಗಳನ್ನು ಕಲೆ ಹಾಕಿ ಟೈ ಸಾಧಿಸಿದವು. ಪುಣೇರಿ ಆಡಿದ 11 ಪಂದ್ಯಗಳಲ್ಲಿ 5 ಜಯ, 3 ಸೋಲು, 3 ಡ್ರಾ ಸಾಧಿಸಿದ್ದು 37 ಅಂಕಗಳನ್ನು ಹೊಂದಿದ್ದು, ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ. ಈ ಟೈನಿಂದಾಗಿ ಯುಪಿ ಯೋಧಾಸ್ ಆಡಿದ 10 ಪಂದ್ಯಗಳಲ್ಲಿ 4 ಜಯ, 5 ಸೋಲು, 1 ಡ್ರಾ ದೊಂದಿಗೆ 28 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದೆ.