ಬೆಂಗಳೂರು: ಮಾನಸಿಕ ಆರೋಗ್ಯ ಮತ್ತು ವೈಯಕ್ತಿಕ ಅಭಿವೃದ್ಧಿಯ ಮುಂಚೂಣಿಯಲ್ಲಿರುವ ಮೆಂಟಲ್ ಸ್ವಿಚ್, ಬೆಂಗಳೂರಿನ ದಿ ಚಾನ್ಸೆರಿ ಪೆವಿಲಿಯನ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ತನ್ನ ಪರಿವರ್ತನಶೀಲ ಅನುಭವಾತ್ಮಕ ಕಲಿಕೆ-ಆಧರಿತ ಕ್ಷೇಮ ಕಾರ್ಯಕ್ರಮಗಳನ್ನು ಪ್ರಾರಂಭಿಸುವುದಾಗಿ ಹೆಮ್ಮೆಯಿಂದ ಪ್ರಕಟಿಸಿದೆ.
ಮೆಂಟಲ್ ಸ್ವಿಚ್ನ ಸಂಸ್ಥಾಪಕರಾದ ಆರ್.ಆರ್.ಶರತ್ ಸಿಂಗ್ ಅವರು ಈ ಆರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಭಾರತದ ಚಿನ್ನದ ಪದಕ ವಿಜೇತೆ ಮತ್ತು ಪ್ಯಾರಾಲಿಂಪಿಕ್ ಅಥ್ಲೀಟ್ ಡಾ. ಮಾಲತಿ ಕೆ ಹೊಳ್ಳ ಅವರನ್ನು ಸನ್ಮಾನಿಸಿದರು.
ಈ ಕಾರ್ಯಕ್ರಮ ವ್ಯಕ್ತಿಗಳು ಒತ್ತಡ, ಆತಂಕ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ನಿರ್ವಹಿಸುವಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ಗುರಿ ಹೊಂದಿದೆ. ಮಾನಸಿಕ ಸ್ವಾಸ್ಥ್ಯಕ್ಕೆ ಅನನ್ಯ, ಪ್ರಾಯೋಗಿಕ ವಿಧಾನವನ್ನು ಮೆಂಟಲ್ ಸ್ವಿಚ್ ಸಾದರಪಡಿಸುವುದರ ಜೊತೆಗೆ, ತಲ್ಲೀನಗೊಳಿಸುವ, ನೈಜ-ಪ್ರಪಂಚದ ಅನುಭವಗಳು ಮತ್ತು ವೈಯಕ್ತೀಕರಿಸಿದ ಮಾನಸಿಕ ಆರೋಗ್ಯ ತಂತ್ರಗಳ ಮೂಲಕ ವ್ಯಕ್ತಿಗಳನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ.
ಕಾರ್ಯಕ್ರಮದಲ್ಲಿ ಎಚ್ಆರ್(ಮಾನವ ಸಂಪನ್ಮೂಲ) ಮತ್ತು ಕಾರ್ಯಕ್ರಮ ನಿರ್ವಹಣೆ ಉದ್ಯಮ ಕ್ಷೇತ್ರದಿಂದ 50 ಕ್ಕೂ ಹೆಚ್ಚು ಸಕ್ರಿಯ ವ್ಯಕ್ತಿಗಳು ಭಾಗವಹಿಸಿದ್ದರು.ಈ ಆರಂಭದ ಭಾಗವಾಗಿ, ಉಚಿತ ಪರಿಚಯಾತ್ಮಕಅವಧಿಗಳು ಮತ್ತು ವೈಯಕ್ತೀಕರಿಸಿದ ಸಮಾಲೋಚನೆಗಳನ್ನು ಮೆಂಟಲ್ ಸ್ವಿಚ್ ಸಾದರಪಡಿಸುತ್ತಿದ್ದು,
ಇವು ಅನುಭವಾತ್ಮಕ ಕಲಿಕೆ ಮತ್ತು ಮಾನಸಿಕ ಸ್ವಾಸ್ಥ್ಯದ ಲಾಭಗಳನ್ನು ಆವಿಷ್ಕರಿಸಲು ವ್ಯಕ್ತಿಗಳಿಗೆ ಸಹಾಯ ಮಾಡುತ್ತವೆ.ಸಕ್ರಿಯ ಕಲಿಕೆಯ ಮೂಲಕ ವ್ಯಕ್ತಿಗಳು ತಮ್ಮ ಮಾನಸಿಕ ಯೋಗಕ್ಷೇಮದ ಉಸ್ತುವಾರಿ ವಹಿಸಿಕೊಳ್ಳಲು ಸಬಲೀಕರಿಸುವುದು ನಮ್ಮ ಉದ್ದೇಶವಾಗಿದೆ ಎಂದು ಮೆಂಟಲ್ ಸ್ವಿಚ್ನ ಸಂಸ್ಥಾಪಕ ಮತ್ತು ಖ್ಯಾತ ಲೇಖಕ, ಜೀವನ ತರಬೇತುದಾರ ಮತ್ತು ಪ್ರೇರಕ ಭಾಷಣಕಾರ ಆರ್.ಆರ್.ಶರತ್ ಸಿಂಗ್ ಹೇಳಿದರು.