ಬೆಂಗಳೂರು: ಚೀನಾದಲ್ಲಿ ಕಾಣಿಸಿಕೊಂಡು ಸಾಕಷ್ಟು ಮಂದಿಗೆ ಸಾವಿಗೆ ಕಾರಣವಾಗಿ ಭೀತಿ ಹುಟ್ಟಿಸಿರುವ ಎಚ್ಎಂಪಿ ವೈರಸ್ ಇದೀಗ ಬೆಂಗಳೂರಿನಲ್ಲೂ ಪತ್ತೆಯಾಗಿದೆ.
8 ತಿಂಗಳ ಮಗುವಿನಲ್ಲಿ ಎಚ್ಎಂಪಿ ವೈರಸ್ ಕಾಣಿಸಿಕೊಂಡಿರುವುದು ದೃಢಪಟ್ಟಿದೆ.ಮಗುವಿಗೆ ಈ ವೈರಸ್ ಹೇಗೆ ಬಂತು ಎಂಬುದರ ಬಗ್ಗೆ ಆರೋಗ್ಯ ಇಲಾಖೆ ಈ ಬಗ್ಗೆ ಪತ್ತೆ ಹಚ್ಚಲು ಮುಂದಾಗಿದೆ.
ಮಗುವಿನ ಪೋಷಕರು ಚೀನಾ ಪ್ರವಾಸ ಕೈಗೊಂಡಿದ್ದರು ಎಂಬುದರ ಬಗ್ಗೆಯೂ ಪತ್ತೆ ಹಚ್ಚಲು ಮುಂದಾಗಿದ್ದಾರೆ. ಆದರೆ ಮಗುವಿನ ಪೋಷಕರು ಚೀನಾ ಪ್ರವಾಸ ಕೈಗೊಂಡ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಮಗುವಿನ ತಂದೆ ಸಣ್ಣಪೆಟ್ಟಾಗಿರುವುದಕ್ಕೆ ಚಿಕಿತ್ಸೆಗಾಗಿ ಕರೆತಂದೆವು. ಆದರೆ ಇಷ್ಟೆಲ್ಲಾ ರದ್ಧಾಂತ ನಡೆಯುತ್ತಿದೆ ಎಂದು ತಮ್ಮ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಆರೋಗ್ಯ ಇಲಾಖೆ ಮಾತ್ರ ಈ ಸಂಬಂಧ ಈಗಾಗಲೇ ಕಟ್ಟೆಚ್ಚರ ವಹಿಸಿ ಇಂದು ಮಧ್ಯಾಹ್ನ ಆರೋಗ್ಯ ಸಚಿವ ದಿನೇಶ್ಗುಂಡೂರಾವ್ ನೇತೃತ್ವದಲ್ಲಿ ಇಲಾಖಾಧಿಕಾರಿಗಳ ಸಭೆ ಕರೆದು ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಲು ಮುಂದಾಗಿದ್ದಾರೆ.
ಮತ್ತೊಂದೆಡೆ ಬಿಜೆಪಿಯ ಶಾಸಕ ಡಾ. ಅಶ್ವತ್ಥನಾರಾಯಣ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯದಲ್ಲಿ ಒಳ್ಳೆಯ ಆಡಳಿತ ಕೊಡ್ರಪ್ಪ ಎಂದರೆ ಕೊಡುತ್ತಿಲ್ಲ. ಎಲ್ಲದರಲ್ಲೂ ದುಡ್ಡು ಹೊಡೆಯುತ್ತಿದ್ದಾರೆ. ಕಡೆ ಪಕ್ಷ ಒಳ್ಳೆಯ ಚಿಕಿತ್ಸೆಯನ್ನಾದರೂ ಕೊಡಿ ಎಂದು ಆಗ್ರಹಪಡಿಸಿದ್ದಾರೆ.ಆರೋಗ್ಯ ಇಲಾಖೆ ವೈರಸ್ ಹರಡದಂತೆ ಮುಂಜಾಗ್ರತೆ ವಹಿಸಲು ಈಗಾಗಲೇ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದೆ.
ಟಿಸ್ಯೂ, ಕರ್ಚ್ಚೀಫ್ ಮರುಬಳಕೆ ಮಾಡಬಾರದು., ಕಣ್ಣು ಬಾಯಿ ಮೂಗು ಮುಟ್ಟಬಾರದು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು, ಅನಾರೋಗ್ಯ ಪೀಡಿತರ ಸಂಪರ್ಕ ಮಾಡಬಾರದು, ಟವೆಲ್, ಬಟ್ಟೆ ಮರು ಬಳಕೆ ಮಾಡುವುದಲ್ಲದೇ ಪರಸ್ಪರ ಹಂಚಿಕೊಳ್ಳಬಾರದು ಎಂದು ಎಚ್ಚರಿಕೆಯ ಸಂದೇಶ ನೀಡಿದ್ದಾರೆ.ಒಟ್ಟಾರೆ ಚೀನಾದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಎಚ್ಎಂಪಿ ವೈರಸ್ ಇದೀಗ ಬೆಂಗಳೂರಿನಲ್ಲೂ ಕಾಣಿಸಿಕೊಂಡಿರುವುದರಿಂದ ಜನತೆಯಲ್ಲಿ ಆತಂಕ ಮೂಡಿಸಿದೆ.ರಾಷ್ಟ್ರೀಯ ಆರೋಗ್ಯ ಇಲಾಖೆ ಸಹ ಈ ಸಂಬಂಧ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮುಂದಾಗಿದೆ.