ಬೆಂಗಳೂರು: ಝೈರಾಯಿನ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಬಕ್ಸಸ್ ಪ್ರೋಸ್ಪೋರ್ಟ್ಸ್ ಸಹಭಾಗಿತ್ವದೊಂದಿಗೆ `ಡ್ರಿವನ್ 5.0’ (ಆಖIಗಿಇಓ 5.0) ಎಂಬ ಹೆಸರಿನಲ್ಲಿ ನಡೆಸಿದ ಮಹಿಳೆಯರ ಕಾರು ಮತ್ತು ಬೈಕ್ ರ್ಯಾಲಿ ಯಶಸ್ವಿಯಾಗಿ ಸಮಾಪ್ತಿಗೊಂಡಿದೆ. ಮಹಿಳಾ ಸಬಲೀಕರಣವನ್ನು ಆಚರಿಸುವ ಮತ್ತು ಸಾಮಾಜಿಕ ವಿಚಾರಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಫೆಬ್ರವರಿ 1 ಮತ್ತು 2ರಂದು ನಡೆದ 2 ದಿನಗಳ ಈ ಕಾರ್ಯಕ್ರಮದಲ್ಲಿ ಬೇರೆ ಬೇರೆ ಹಿನ್ನೆಲೆಯ ಸುಮಾರು 80 ಮಹಿಳೆಯರು ಒಂದು ಉದ್ದೇಶಕ್ಕಾಗಿ ಒಂದೇ ಸೂರಿನಡಿ ಸೇರಿ ಕಾರು, ಬೈಕ್ ಚಾಲನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ಬೆಂಗಳೂರಿನ ದಿ ಲೀಲಾ ಭಾರತೀಯ ಸಿಟಿಯಲ್ಲಿ ಫೆಬ್ರವರಿ 1ರ ಮುಂಜಾನೆ 6 ಗಂಟೆಗೆ ಈ ರ್ಯಾಲಿಗೆ ಚಾಲನೆ ನೀಡಲಾಯಿತು. ಬಹಳ ಆಸಕ್ತಿಯಿಂದ ಪಾಲ್ಗೊಂಡ ಎಲ್ಲ ಮಹಿಳೆಯರೂ ಬೆಂಗಳೂರಿನಿಂದ ರಸ್ತೆಯುದ್ದಕ್ಕೂ ಪ್ರಾಕೃತಿಕ ಸೌಂದರ್ಯವನ್ನು ಸವಿಯುತ್ತಾ ಐತಿಹಾಸಿಕ ನಗರಿ ಹಂಪಿಯವರೆಗೂ ಪಯಣಿಸಿದರು. ಹಂಪಿಯ ಹ್ಯಾತ್ ಪ್ಲೇಸ್ನಲ್ಲಿ ಅದ್ಧೂರಿ ಸಂಭ್ರಮಾಚರಣೆ ಮತ್ತು ಸಮಾರೋಪ ಸಮಾರಂಭದ ಮೂಲಕ ಈ ಕಾರ್ಯಕ್ರಮವು ಸಮಾಪ್ತಿಗೊಂಡಿತು. ಅಲ್ಲಿ ರ್ಯಾಲಿಯಲ್ಲಿ ಪಾಲ್ಗೊಂಡ ಎಲ್ಲ ಮಹಿಳೆಯರೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು, ಸಬಲೀಕರಣದ ಸ್ಫೂರ್ತಿಯನ್ನು ಸಂಭ್ರಮಿಸಿದರು.
ಕಾರ್ಯಕ್ರಮದ ಯಶಸ್ಸಿನ ಕುರಿತು ಮಾತನಾಡಿದ ಝೆರಾಯಿನ್ ವ್ಯವಸ್ಥಾಪಕ ನಿರ್ದೇಶಕರಾದ ಅರವಿಂದ್ ಜೆ ಸಭಾನೆ ಅವರು, ಡ್ರಿವನ್ ಎನ್ನುವುದು ಕೇವಲ ಒಂದು ರ್ಯಾಲಿಯಾಗಿರಲಿಲ್ಲ; ಅದು ಮಹಿಳೆಯರ ಶಕ್ತಿ, ಏಕತೆ ಮತ್ತು ಸಮಾಜದಲ್ಲಿ ಬದಲಾವಣೆಗೆ ತರಬಲ್ಲ ಅವರ ಸಾಮರ್ಥ್ಯವನ್ನು ಸಂಭ್ರಮಿಸುವ ಒಂದು ಚಳವಳಿಯಾಗಿತ್ತು. ಹಲವಾರು ಮಹಿಳೆಯರು ಉತ್ಸಾಹ ಹಾಗೂ ಉದ್ದೇಶದೊಂದಿಗೆ ಒಗ್ಗೂಡಿರುವುದು ನಿಜಕ್ಕೂ ಪ್ರೇರಣದಾಯಕವಾಗಿದೆ ಎಂದರು.
ರ್ಯಾಲಿಯಲ್ಲಿ ಭಾಗವಹಿಸಿದ್ದ ಉತ್ಸಾಹಿ ಮೋಟರಿಸ್ಟ್ ಮತ್ತು ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಗೆದ್ದಿರುವ ನಿಶಾ ಜೋಸ್ ಅವರೂ ತಮ್ಮ ಅನುಭವಗಳನ್ನು ಹಂಚಿಕೊಂಡರು. ಎಲ್ಲ ಕ್ಷೇತ್ರಗಳ ಮಹಿಳೆಯರೂ ಒಂದೆಡೆ ಸೇರಿ ಸಂಭ್ರಮಿಸುವ, ಪರಸ್ಪರ ಬೆಂಬಲಿಸುವ ಮತ್ತು ಅರ್ಥಪೂರ್ಣ ಉದ್ದೇಶಗಳಿಗಾಗಿ ಒಂದಾಗುವುದನ್ನು ನೋಡುವುದೇ ಕಣ್ಣಿಗೆ ಹಬ್ಬ.