ದೇವನಹಳ್ಳಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಂಗಸಂಸ್ಥೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ನೌಕರರ ಸಂಘದ ಶಾಖೆಗೆ ಅಧ್ಯಕ್ಷ ಸ್ಥಾನದ ಚುನಾವಣೆಗೆ ಪಿ.ಗಂಗಾಧರ್ ನಾಮಪತ್ರ ಸಲ್ಲಿಸಿದರು.
ಇದೇ ಇದೇ ತಿಂಗಳು 16ರಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 47 ಇಲಾಖೆಗಳ 59 ಜನ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿ ಅಯ್ಕೆಯಾಗಿದ್ದರು, ಅದರಲ್ಲಿ ಅನೇಕರು ಅವಿರೋಧವಾಗಿ ಆಯ್ಕೆ ಯಾಗಿದ್ದರು ಅವರಲ್ಲಿ ಗಂಗಾಧರ್ ಕೂಡ ಅವಿರೋಧವಾಗಿ ಆಯ್ಕೆಯಾಗಿದ್ದರು, ಡಿಸೆಂಬರ್ 4ರಂದು ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಇದುವರೆಗೂ ಗಂಗಾಧರ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಸಲ್ಲಿಸಲು ನ.
27 ಕೊನೆಯ ದಿನವಾಗಿದ್ದು ಅಷ್ಠರಲ್ಲಿ ಯಾರೂನಾಮಪತ್ರ ಸಲ್ಲಿಸದಿದ್ದರೆ ಗಂಗಾಧರ್ ಅವಿರೋಧ ವಾಗಿ ಆಯ್ಕೆಯಾಗುವ ಸಂಭವವಿದೆ, ಜನಾನುರಾಗಿ ಯಾಗಿರುವ ಗಂಗಾಧರ್ ಅವರ ವಿರುದ್ದ ನಾಮಪತ್ರ ಯಾರೂ ಸಲ್ಲಿಸುವಂತೆ ಕಾಣುತ್ತಿಲ್ಲ.
ನಾಮ ಪತ್ರ ಸಲ್ಲಿಸಿದ ಪಿ.ಗಂಗಾಧರ್ ಮಾತನಾಡಿ ಬೆಂ.ಗ್ರಾ.ಜಿಲ್ಲೆಯ ಸರ್ಕಾರಿ ನೌಕರರ ಸಂಘದ ಎಲ್ಲಾ ಸದಸ್ಯರು ನನ್ನನ್ನು ನಿರ್ದೇಶಕ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ, ಅದೇರೀತಿ ಅಧ್ಯಕ್ಷ ಸ್ಥಾನಕ್ಕೂ ಅವಿರೋಧ ಆಯ್ಕೆ ಮಾಡಲು ನಿರ್ದೇಶಕರು ಸಹಕಾರ ನೀಡುವರೆಂದು ನಂಬಿದ್ದೇವೆ, ಇದೇ ಸಂದರ್ಭದಲ್ಲಿ ರಾಜ್ಯ ಪರಿಷತ್ ಸ್ಥಾನಕ್ಕೆ ನಾರಾಯಣಗೌಡ, ಖಜಾಂಚಿ ಸ್ಥಾನಕ್ಕೆ ಉಮಾಶಂಕರ್ ಸೇರಿ ನಾಮಪತ್ರ ಸಲ್ಲಿಸಿದ್ದೇವೆ, ಕಾರ್ಯದರ್ಶೀ ಕೂಡ ನಮ್ಮೊಂದಿಗಿದ್ದಾರೆ ಎಂದರು.
ನಮ್ಮ ಬೆಂಗಳೂರು ಗ್ರಾಮಾಂತರ ಜಿಲ್ಲೆ ನಗರ ಜಿಲ್ಲೆಗೆ ಹೊಂದಿಕೊಂಡಿರುವುದರಿಂದ ಹೆಚ್.ಆರ್.ಎ.ಮತ್ತು ಸಿ.ಸಿ.ಎ, ನಗರ ಪ್ರದೇಶದ ನೌಕರರಿಗೆ ನೀಡುವಂತೆ ನಮಗೂ ನೀಡಬೇಕು, ಹೊಸ ಪಿಂಚಣಿ ಯೋಜನೆ ಕೈಬಿಟ್ಟು ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರಲು ಹೋರಾಟ, ನಮ್ಮ ಎಲ್ಲಾ ನೌಕರರಿಗೂ ಆರೋಗ್ಯ ಸಂಜೀವಿನಿ ಮೂಲಕ ಉಚಿತ ಚಿಕಿತ್ಸೆ ನೀಡುವ ಯೋಜನೆ ಪ್ರಮುಖ ಅಂಶಗಳು ಹಾಗೂ ನೌಕರರ ಯಾವುದೇ ತೊಂದರೆಗೆ ಸ್ಪಂದಿಸಿ ನಿವಾರಿಸಲು ನಮ್ಮ ಆಡಳಿತ ಮಂಡಳಿ ಬದ್ದವಾಗಿದೆ ಎಲ್ಲಾ ನಿರ್ದೇಶಕರು ಸಹಕಾರ ನೀಡಿ ಎಂದು ವಿನಂತಿಸಿಕೊಂಡರು.
ನಾಮಪತ್ರ ಸಲ್ಲಿಕೆಗೂ ಮೊದಲು ಪಟ್ಟಣದಲ್ಲಿ ನೆಲೆಸಿರುವ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಅಭಿಷೇಕ, ವಿಶೇಷ ಪೂಜೆ ನೆರವೇರಿಸಿ ಆಗಮಿಸಿದ್ದ ಭಕ್ತಾಧಿಗಳಿಗೆ ತೀರ್ಥ ಪ್ರಸಾಧ ವಿನಿಯೋಗದ ನಂತರ ಸರ್ಕಾರಿ ನೌಕರರ ಸಂಘದ ಚುನಾವಣಾ ಕಛೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.ಇದೇ ಸಮಯದಲ್ಲಿ ವಿವಿಧ ಇಲಾಖೆಗಳಿಂದ ನೂತನವಾಗಿ ಆಯ್ಕೆಗೊಂಡ ನಿರ್ದೇಶಕರು, ಅಧಿಕಾರಿಗಳು, ಸಿಬ್ಬಂದಿ ವರ್ಗದವರು ನಾಮಪತ್ರ ಸಲ್ಲಿಸುವ ವೇಳೆ ಹಾಜರಿದ್ದು ಶೂಭ ಕೋರಿದರು.