ಬೆಂಗಳೂರು: ಪ್ರತಿಷ್ಠಿತ ಬೆಂಗಳೂರು ಪ್ರೆಸ್ ಕ್ಲಬ್ನ ಅಧ್ಯಕ್ಷರಾಗಿ ಆರ್. ಶ್ರೀಧರ್ ಪುನರಾಯ್ಕೆಯಾಗಿದ್ದಾರ.ಎಭಾನುವಾರ ನಡೆದ ಕ್ಲಬ್ನ ಪದಾಧಿಕಾರಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆಯಲ್ಲಿ ಶ್ರೀಧರ್ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಬಿ.ಎನ್.ಮೋಹನ್, ಶಿವಕುಮಾರ್ ಎಂ.ಎಡಿ.(ಬೆಳ್ಳಿತಟ್ಟೆ),
ಕಾರ್ಯದರ್ಶಿಯಾಗಿ ಮಂಜುನಾಥ್ ಜಿ.ವೈ, ಜಂಟಿ ಕಾರ್ಯದರ್ಶಿಯಾಗಿ ಧರಣೀಶ್ ಬಿ.ಎನ್, ಖಜಾಂಚಿಯಾಗಿ ಗಣೇಶ್ ಜಿ.ಕಾರ್ಯಕಾರಿ ಸಮಿತಿ ಸದಸ್ಯರಾಗಿ ಇಂದುಸಂಜೆ ಪತ್ರಿಕೆಯ ಪ್ರಧಾನ ಛಾಯಾಗ್ರಾಹಕ ಶರಣಬಸಪ್ಪ ಎ.ಎಚ್, ಶಿವಣ್ಣ, ಯಾಸಿರ್ ಮುಸ್ತಾಕ್, ಮಮ್ತಾಜ್ಅಲಿಮ್, ರೋಹಿಣಿ ವಿ. ಅಡಿಗ, ಸಿ.ಆರ್.ಮಂಜುನಾಥ್, ಮಹಿಳಾ ಮೀಸಲು ವಿಭಾಗದಿಂದ ಮಿನಿ ತೇಜಸ್ವಿನಿ ಆಯ್ಕೆಯಾಗಿದ್ದಾರೆ.ನೂತನವಾಗಿ ಆಯ್ಕೆಯಾದ ಪದಾಧಿಕಾರಿ ಸದಸ್ಯರಿಗೆ ಇಂದುಸಂಜೆ ಪತ್ರಿಕಾಬಳಗದಿಂದ ಅಭಿನಂದನೆಗಳು.