ಬೆಂಗಳೂರು : ರಾಜ್ಯಪಾಲರು ಜೈವಿಕ ವನ ಹಾಳಾಗತ್ತಿರುವ ಬಗ್ಗೆ ದೂರು ಬಂದಿದ್ದು, ಕುಲಪತಿಗಳು ವಿವರಣೆ ನೀಡಲು ಆದೇಶಿಸಿದ್ದಾರೆ.ಜೈವಿಕ ವೈವಿಧ್ಯ ವನದ ಬಗ್ಗೆ ವರದಿ ನೀಡಲು ಕಮಿಟಿ ರಚಿಸಲಾಗಿದೆ. ವರದಿ ಸಲ್ಲಿಸುವ ಪ್ರಾಧ್ಯಾಪಕರು ಒತ್ತಡಕ್ಕೆ ಒಳಗಾಗಿರುವಂತಿದೆ.
ಜೈವಿಕ ವೈವಿಧ್ಯ ಹಾಗೂ ಕಾಡಿನ ಪ್ರದೇಶದ ವಿವರಗಳು, ಅರಣ್ಯ ಮತ್ತು ಜೈವಿಕ ವೈವಿಧ್ಯ ಕಾಯಿದೆಯ ಪ್ರಕಾರ ಸಹ್ಯಾದ್ರಿವನ ಸಂಪತ್ತು ಹಾಗೂ ಪೂರ್ಣವಾಗಿ ಜೈವಿಕ ವೈವಿಧ್ಯ ವನದ ಸತ್ಯಾಂಶಗಳ ಸಮೇತ ವರದಿ ತಯಾರಿಸಿದ್ದು, ಕಮಿಟಿಯ ಓರ್ವ ಸದಸ್ಯರು ಸಹಿ ಮಾಡಿಲ್ಲವೆಂದು ತಿಳಿದು ಬಂದಿದೆ. ಕುಲಪತಿಗಳು ಬಯೋ ಪಾರ್ಕ್ ರಕ್ಷಣೆಗೆ ಬದ್ಧತೆ ತೋರುವಲ್ಲಿ ವಿಫಲತೆ.
ಐವತ್ತು ಎಕರೆ ಯುವಿಸಿಇಗೆ ಮತ್ತು 7ಎಕರೆ ರಾಷ್ಟ್ರೀಯ ಕಾನೂನು ಸ್ಕೂಲ್ ಆಫ್ ಇಂಡಿಯಾಗೆ ನೀಡಿರುವುದೂ ಅವರ ಕ್ಷಮತೆಗೆ ಕುಂದು ತಂದಿದೆ. ಇಷ್ಟೇ ಅಲ್ಲದೆ ಸುಮಾರು 300 ಎಕರೆ ನೀಡಲು ಮಂತ್ರಿಗಳು ಟಿಪ್ಪಣಿ ಕಳುಹಿಸಿದ್ದು, ಬಯೋ ಪಾರ್ಕ್ ಸರ್ವನಾಶ ಆಗುವುದು. ಒತ್ತಡಕ್ಕೆ ಒಳಗಾಗಿದ್ದೇನೆಂದು ಕುಲಪತಿಗಳು ಪತ್ರಿಕೆಯ ಸಂದರ್ಶನದಲ್ಲಿ ಹೇಳಿದ್ದಾರೆ. ಯಾವುದೇ ಒತ್ತಡಕ್ಕೆ ಒಳಗಾಗದೆ ಜ್ಞಾನ ಭಾರತಿ ಜೈವಿಕ ವೈವಿಧ್ಯ ವನ ರಕ್ಷಣೆ ಆಗಲು ಕಮಿಟಿಯ ವರದಿ ಯತಾವತ್ತಾಗಿ ಆಗಬೇಕಾಗಿದೆ.