ನವದೆಹಲಿ: ಬೆಂಬಲ ಬೆಲೆ ಯೋಜನೆಯಡಿ ರಾಜ್ಯಗಳಿಂದ ಉದ್ದು, ಸೋಯಾಬೀನ್ ಖರೀದಿಗೆ ಕೇಂದ್ರ ಖರೀದಿಗೆ ಕೃಷಿ ಸಚಿವಾಲಯ ಅನುಮತಿ ನೀಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು. ಮುಕ್ತ ಮಾರುಕಟ್ಟೆಯಲ್ಲಿ ಈ ಬೆಳೆಗಳಿಗೆ ಬೆಲೆ ಕಡಿಮೆ ಇರುವ ಹಿನ್ನಲೆ ಖರೀದಿಗೆ ಅನುಮತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಉದ್ದು ಮತ್ತು ಸೋಯಾಬೀನ್ ಪ್ರತಿ ಕ್ವಿಂಟಾಲ್ಗೆ ಕ್ರಮವಾಗಿ 7,400 ಮತ್ತು 4,892 ರೂ. ಮೌಲ್ಯದಲ್ಲಿ ಖರೀದಿಗೆ ಅನುಮತಿ ದೊರೆತಿದೆ. ರಾಜ್ಯದ ರೈತರು ಬೆಳೆದ 19,760 ಮೆಟ್ರಿಕ್ ಟನ್ ಉದ್ದಿನ ಬೇಳೆ, 1,03,315 ಮೆಟ್ರಿಕ್ ಟನ್ ಸೋಯಾಬೀನ್ ಖರೀದಿ ಮಾಡಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ ಎಂದು ಪ್ರಹ್ಲಾದ್ ಜೋಶಿ ಮಾಹಿತಿ ನೀಡಿದ್ದಾರೆ.ರಾಜ್ಯ ಸರ್ಕಾರವು ತಕ್ಷಣವೇ ರಾಜ್ಯಾದ್ಯಂತ ಖರೀದಿ ಕೇಂದ್ರಗಳನ್ನು ಆರಂಭಿಸಿ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಬೇಕೆಂದು ಜೋಶಿ ಮನವಿ ಮಾಡಿದ್ದಾರೆ.