ದೇವನಹಳ್ಳಿ: ಬೆಟ್ಟಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಉತ್ತಮ ಚರಂಡಿ, ರಸ್ತೆ ನೀರಿನ ಸಂಪರ್ಕ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಿ ಅಭಿವೃದ್ಧಿ ಮಾಡಲು ನಾನು ಸದಾಸಿದ್ದ ಎಂದು ಬೆಟ್ಟಕೋಟೆ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷ ಡಿ.ವಿ.ಭೀಮೇಶ. ಹೇಳಿದರು.
ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ಬೆಟ್ಟಕೋಟೆ ಗ್ರಾಪಂ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಅಭಿನಂದನೆ ಸ್ವೀಕರಿಸಿ ಮಾತನಾಡಿ ಪಂಚಾಯ್ತಿಯ ಎಲ್ಲಾ ಒಂಭತ್ತು ಸದಸ್ಯರ ಸರ್ವಾನುಮತ ದಿಂದ ಅಧ್ಯಕ್ಷನನ್ನಾಗಿ ಅವಿರೋಧವಾಗಿ ಆಯ್ಕೆ ಅವರೆಲ್ಲರಿಗೂ ಆಯ್ಕೆಗಾಗಿ ಸಹಕಾರ ನೀಡಿದ ಕಾಂಗ್ರೆಸ್ ಮುಖಂಡರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಜಿ.ಲಕ್ಷ್ಮೀನಾರಾಯಣಪ್ಪ ಮಾತನಾಡಿ ಬೆಟ್ಟಕೋಟೆ ಗ್ರಾಮ ಪಂಚಾಯತಿ ಎಲ್ಲಾ ಸದಸ್ಯರ ಸಮನ್ವಯದಿಂದ ಅಧ್ಯಕ್ಷರಾಗಿರುವ ಭೀಮೇಶ್ ಉತ್ತಮ ಆಡಳಿತ ನೀಡಿ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿ ಮಾಡಲಿ, ಒಳ್ಳೆಯ ಹೊಸ ಯೋಜನೆಗಳನ್ನು ರೂಪಿಸಿ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಬೆಟ್ಟಕೋಟೆ ಗ್ರಾಮಪಂಚಾಯತಿ ಉಪಾಧ್ಯಕ್ಷೆ ಎನ್.ಅನಿತಾ,ಮಾಜಿ ಅಧ್ಯಕ್ಷರು ಮತ್ತು ಹಾಲಿ ಸದಸ್ಯರುಗಳಾದ ಲೋಕೇಶ್ ಗಾಂಧಿ ಮತ್ತು ಮಂಜುನಾಥ್ ಎಂ. ದೊಡ್ಡಸಣ್ಣೆ ಮುನಿರಾಜು, ಸದಸ್ಯರಾದ ನಾರಾಯಣಸ್ವಾಮಿ, ಭಾಗ್ಯಲಕ್ಷ್ಮಿ ಕೆ.ಬಿ, ವಿದ್ಯಾರಾಣಿ. ಎಸ್, ವಿಜಯಲಕ್ಷ್ಮಿ, ವಿಶಾಲಾಕ್ಷಿ, ಅರ್ಚನಾ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಎಸ್.ಆರ್.ರವಿಕುಮಾರ್, ವಿಜಯಪುರ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ವೆಂಕಟೇಶ್, ಮುಖಂಡರುಗಳಾದ ವೆಂಕಟೇಶ್, ಚೌಡಪ್ಪನಹಳ್ಳಿ ಲೋಕೇಶ್, ಗಂಗಾಧರ ಮೂರ್ತಿ, ಲಲಿತೇಶ್, ಮುನೇಗೌಡ, ಮಲ್ಲೇಶ್, ಚನ್ನಕೇಶವ, ಪಿಡಿಒ ಕೆಂಪರಾಜಯ್ಯ, ಚುನಾವಣಾಧಿಕಾರಿ ಮಲ್ಲಿಕಾರ್ಜುನ್ ಬಾಬು ಸೇರಿದಂತೆ ಹಲವಾರು ಮುಖಂಡರು ಮತ್ತು ಸದಸ್ಯರು ಮತ್ತಿತರರು ಇದ್ದರು.