ದೇವನಹಳ್ಳಿ: ಬ್ಯಾಸ್ಕೆಟ್ಬಾಲ್ ಕ್ರೀಡಾಪಟುಗಳು ಬೆಟ್ಟಕೋಟೆ ಗ್ರಾ.ಪಂ.ನಿಂದ ನೂತನವಾಗಿ ನಿರ್ಮಿಸಿರುವ ಈ ಕ್ರೀಡಾಂಕಣವನ್ನು ಸದುಪಯೋಗಪಡಿಸಿ ಕೊಂಡು ಉತ್ತಮವಾಗಿ ಕಲಿತು ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಿ ರಾಜ್ಯಕ್ಕೆ ಮತ್ತು ನಮ್ಮ ದೇವನಹಳ್ಳಿಗೆ ಹೆಸರುಗಳಿಸಲಿ ಎಂದು ಆಹಾರ ಮತ್ತು ನಾಗರೀಕ ಸರಬರಾಜು, ಗ್ರಾಹಕ ವ್ಯವಹಾರಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು.
ಅವರು ದೇವನಹಳ್ಳಿ ತಾಲೂಕಿನ ಬೆಟ್ಟಕೋಟೆ ಗ್ರಾಮದ ಶ್ರೀ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಶ್ರೀ ರಾಮಕೃಷ್ಣ ಪ್ರೌಢಶಾಲಾ ಆವರಣದಲ್ಲಿ ನಿರ್ಮಾಣವಾಗಿರುವ ಬ್ಯಾಸ್ಕೆಟ್ಬಾಲ್ ಕೋರ್ಟ್ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ತಮಗೆ ಇಷ್ಠವಾದ ಕ್ರೀಡೆಗಳಲ್ಲಿ ಭಾಗವಹಿಸಿ ನೂತನವಾಗಿ ಉದ್ಘಾಟನೆಗೊಂಡಿರುವ ಕ್ರೀಡಾಂಗಣವು ಯುವಕರ ಪ್ರತಿಭೆಯನ್ನು ವಿಕಸನಗೊಳಿಸಿ ಮುಂದೊಂದು ದಿನ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ರಂಗದಲ್ಲಿ ದೇಶಕ್ಕೆ ಕೀರ್ತಿ ತರುವಂತಾಗಲಿ ಎಂದು ಅವರು ಆಶಾವಾದ ವ್ಯಕ್ತಪಡಿಸಿದರು.
ಇದೇ ಸಮಯದಲ್ಲಿ ರೆಡ್ಡಿಹಳ್ಳಿ ಗ್ರಾಮದ ಹಾಲಿನ ಡೈರಿಯ ಮೊದಲನೇ ಮಹಡಿ ಉದ್ಘಾಟನೆ ಮತ್ತು ಶುದ್ಧ ಕುಡಿಯುವ ನೀರಿನ ಘಟಕ, ಡಾ|| ಬಿ.ಆರ್. ಆಂಬೇಡ್ಕರ್ ಭವನ ಉದ್ಘಾಟನೆ ಹಾಗೂ ಪೀಠೋಪಕರಣಗಳ ಕೊಡುಗೆಯ ಸಮಾರಂಭ ನೆರವೇರಿಸಿದರು,ಕ್ರೀಡಾ ಚಟುವಟಿಕೆಗಳಿಗೆ ಹೊರತಾಗಿ, ಈ ಕ್ರೀಡಾಂಗಣವನ್ನು ಇತರ ಕಾರ್ಯಕ್ರಮಗಳನ್ನು ನಡೆಸಲು ಬಹು-ಉದ್ದೇಶದ ಸಭಾಂಗಣವಾಗಿಯೂ ಬಳಸಬಹುದು ಎಂದು ಅಭಿಪ್ರಾಯಪಟ್ಟರು ಹಾಗೂ ರೆಡ್ಡಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ವ್ಯವಹಾರಗಳಲ್ಲಿ ಹೆಚ್ಚಾಗಿ ರೈತರು ಭಾಗಿಯಾಗಿ ಸಂಘದ ಅಭಿವೃದ್ಧಿಗೆ ಸಹಕಾರಿಯಾಗಬೇಕು ಎಂದು ಸಲಹೆ ನೀಡಿದರು, ಇದೇ ಸಂದರ್ಭದಲ್ಲಿ ಬೆಟ್ಟಕೋಟೆ ಗ್ರಾಮಪಂಚಾಯತಿ 5 ನೇ ಹಣಕಾಸು ಆಯೋಗದಲ್ಲಿ 108 ಜನ ವಿಶೇಷ ಚೇತನರಿಗೆ ವಿದ್ಯುತ್ ಚಾಲಿತ ಮಿಕ್ಸಿ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ದೇವನಹಳ್ಳಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶ್ರೀನಾಥ್ಗೌಡ, ಬೆಟ್ಟಕೋಟೆ ಗ್ರಾ.ಪಂ ಅಧ್ಯಕ್ಷ ಆರ್.ಲೋಕೇಶ್ ಗಾಂಧಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ನಳಿನಾಕ್ಷಿ, ರೆಡ್ಡಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಜೇಶ್, ಉಪಾಧ್ಯಕ್ಷ ಆರ್. ವಿ.ಮಾರುತಿ, ಬೆಟ್ಟಕೋಟೆ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಅನಿತಾ, ಸದಸ್ಯರಾದ ಭೀಮೇಶ್, ಮಂಜುನಾಥ್, ವಿಶಾಲಾಕ್ಷಿ, ವಿದ್ಯಾರಾಣಿ, ಭಾಗ್ಯಲಕ್ಷ್ಮಿ, ಅರ್ಚನಾ, ನಾರಾಯಣಸ್ವಾಮಿ, ಪಿ.ಡಿ.ಒ ಕೆಂಪರಾಜು, ಜಿಲ್ಲಾ ಗ್ಯಾರಂಟಿಗಳ ಜಿಲ್ಲಾಧ್ಯಕ್ಷ ಚನ್ನಹಳ್ಳಿ ರಾಜಣ್ಣ, ಬೂದಿಗೆರೆ ಲಕ್ಷ್ಮಣ್ಗೌಡ, ಚೌಡಪ್ಪನಹಳ್ಳಿ ಲೋಕೇಶ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಹಿತ್ತರಹಳ್ಳಿ ರಮೇಶ್, ಜಿಲ್ಲಾ ಛಲವಾದಿ ಸಮಾಜದ ಅಧ್ಯಕ್ಷ ಮುನಿರಾಜು, ಅಶ್ವತ್ಥನಾರಾಯಣ್,ಶ್ರೀನಿವಾಸ್, ವೆಂಕಟೆಗೌಡ, ಸೇರಿದಂತೆ ಚುನಾಯಿತ ಜನ ಪ್ರತಿನಿಧಿಗಳು ಸಿಬ್ಬಂದಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.