ಬೆಂಗಳೂರು: ಐಶ್ವರ್ಯಗೌಡ ಎಂಬುವರು ಚಿನ್ನದ ಅಂಗಡಿ ಮಾಲೀಕರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ತಾವು ಡಿ.ಕೆ.ಸುರೇಶ್ ಹೆಸರಿನಲ್ಲಿ ಬೆದರಿಕೆ ಒಡ್ಡಿದ್ದೇನೆ ಎಂಬ ಕೇಳಿಬಂದಿರುವ ಮಾತಿಗೆ ತಾವು ಯಾವುದೇ ರೀತಿಯ ಬೆದರಿಕೆ ಹಾಕಿಲ್ಲ ಎಂದು ನಟ ಧರ್ಮೇಂದ್ರ ಸ್ಪಷ್ಟಪಡಿಸಿದ್ದಾರೆ.
ಸುದ್ದಿವಾಹಿನಿಯೊಂದರೊಂದಿಗೆ ಮಾತನಾಡಿದ ಅವರು, ನಾನೇನಾದರೂ ಬೆದರಿಕೆ ಹಾಕಿದ್ದರೆ ನನಗೆ ಶಿಕ್ಷೆಯಾಗಲಿ ಎಂದಿದ್ದಾರೆ.
ವನಿತಾ ಎಂಬುವರು ಆರೋಪಿ ಎನ್ನಲಾದ ಐಶ್ವರ್ಯ ಎಂವರು ಮನೆಯಲ್ಲಿ ಭೇಟಿಯಾಗಿದ್ದರು. ಚಿನ್ನದ ಬಗ್ಗೆ ಮಾತನಾಡಿದ್ದೇನೆ. ಒಂದು ವರ್ಷವಾಯಿತು ಮಾತನಾಡಿ, ನನ್ನ ಬ್ಯಾಂಕ್ ಖಾತೆಯಲ್ಲಿ 10 ಲಕ್ಷ ರೂ.ಗಳು ಮಾತ್ರ ಇದೆ. 8 ಕೋಟಿ ರೂಪಾಯಿ ಮಾತೆಲ್ಲಿ ಎಂದು ಹೇಳಿರುವ ಅವರು, ಏನೇ ಇದ್ದರೂ ತನಿಖೆಯಾಗಲಿ ಎಂದು ತಿಳಿಸಿದ್ದಾರೆ.