ನವದೆಹಲಿ: ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿದಂತೆ ಬಾಂಗ್ಲಾದೇಶ ಮತ್ತೊಂದು ಇರಾನ್ ಅಥವಾ ಆಫ್ಘಾನಿಸ್ತಾನವಾಗುವುದೇ ಎಂಬ ಸಂದೇಹ ಉಂಟಾಗಿದೆ. ದೇಶದಲ್ಲಿ ಇತ್ತೀಚಿನ ರಾಜಕೀಯ ಕ್ಷೋಭೆಗೆ ಮಹಿಳೆಯರು ತುತ್ತಾಗುತ್ತಿದ್ದಾರೆ.
ಪ್ರಸ್ತುತ ಮಧ್ಯಂತರ ಸರ್ಕಾರದ ಬೆಂಬಲವನ್ನು ಹೊಂದಿರುವ ಮೂಲಭೂತ ಅಂಶಗಳು ಮಹಿಳೆಯರಿಗೆ ಇಲ್ಲಿಯವರೆಗೆ ಹೊಂದಿದ್ದ ಸ್ವಾತಂತ್ರ್ಯವನ್ನು ದೂರ ಮಾಡುವ ಉದ್ದೇಶವನ್ನು ತೋರುತ್ತಿವೆ.
ನಾನು ಎಂದಿಗೂ ನನ್ನ ತಲೆ ಅಥವಾ ಮುಖವನ್ನು ಸ್ಕಾರ್ಫ್ನಿಂದ ಮುಚ್ಚಿಲ್ಲ, ಮುಂದೆಯೂ ಮಾಡುವುದಿಲ್ಲ. ನಾನು ಮಹಿಳೆಯಾಗಿ ಸಾಧಾ ಜೀವನವನ್ನು ಸಾಗಿಸಲು ಬಯಸುತ್ತೇನೆ, ನಾನು ಧರಿಸುವುದನ್ನು ಯಾರಾದರೂ ಏಕೆ ವಿರೋಧಿಸಬೇಕು? ಪಾಶ್ಚಿಮಾತ್ಯ ಶೈಲಿಯ ಬಟ್ಟೆಗಳನ್ನು ಧರಿಸಿರುವ ಮಹಿಳೆ ಆಗಾಗ್ಗೆ ಬೆದರಿಕೆಗೆ, ಅವಮಾನಕ್ಕೆ ಮತ್ತು ಕೆಟ್ಟ ಮಾತುಗಳಿಗೆ ಒಳಗಾಗುತ್ತಾರೆ ಎಂದು ಢಾಕಾದ ಬರಹಗಾರ ನಸೀಮ್ ರಹತ್ ಬಾನೊ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಹೇಳುತ್ತಾರೆ.
ವಯಸ್ಸಾದ ಮಹಿಳೆಯರು ಮಾತ್ರವಲ್ಲ ಹದಿಹರೆಯದ ಹೆಣ್ಣುಮಕ್ಕಳೂ ಸಹ ಈಗ ಧರ್ಮೋಪದೇಶ ಮತ್ತು ಉಪದೇಶಕ್ಕೆ ಒಳಗಾಗುತ್ತಿದ್ದಾರೆ. ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪದಚ್ಯುತಿ ನಂತರ ಮಹಿಳೆಯರ ಸ್ಥಿತಿಗತಿ ಬದಲಾಗುತ್ತಿರುವಂತೆ ತೋರುತ್ತಿದೆ.