ಬೆಳಗಾವಿ: ಭವಿಷ್ಯ ನಿಧಿ ಪಾವತಿ, ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಸಂಘ ಬೆಳಗಾವಿಯ ಸುವರ್ಣಸೌಧದ ಮುಂದೆ ಸೋಮವಾರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿತು. ಈ ಮೂಲಕ ಸರ್ಕಾರಕ್ಕೆ ಚಳಿಗಾಲ ಅಧಿವೇಶನ ಮೊದಲೇ ಪ್ರತಿಭಟನೆಯ ಬಿಸಿ ತಟ್ಟಿತು.
ಸುವರ್ಣ ವಿಧಾನಸೌಧದ ಬಳಿಯ ಕೊಂಡುಸ್ಕೋಪ್ಪ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ನೌಕರರು ಪ್ರತಿಭಟನೆ ನಡೆಸಿದರು.
2,595.29 ಕೋಟಿ ಪಿಎಫ್, ಓವಕ್ ಟೈಮ್ ಕೆಲಸ ಮಾಡಿದವರಿಗೆ 306.87 ಕೋಟಿ ರೂ., ಹಣದುಬ್ಬರ ಭತ್ಯೆ 306 ಕೋಟಿ, ಇಂಧನ ಪಾವತಿ 659.25 ಕೋಟಿ ಸೇರಿದಂತೆ 5,492.24 ಕೋಟಿ ರೂ.ಗಳನ್ನು ರಾಜ್ಯ ಸರಕಾರ ಸಾರಿಗೆ ನಿಗಮಕ್ಕ ಪಾವತಿಸಬೇಕಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಕಳೆದ ಅಕ್ಟೋಬರ್ ನಲ್ಲಿ ಹೇಳಿಕೆ ನೀಡಿದ್ದರು. ಟಿಕೆಟ್ ದರವನ್ನು ಪರಿಷ್ಕರಿಸುವ ಮೂಲಕ ಮಾತ್ರ ಈ ಮೊತ್ತವನ್ನು ವ್ಯವಸ್ಥೆಗೊಳಿಸಬಹುದು, ಈ ವಿಚಾರವನ್ನು ಸಿಎಂ ಗಮನಕ್ಕೆ ತಂದು 15 ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದರು.
ಆದರೆ, ಸರಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿಲ್ಲ ಎಂದು. ಹೀಗಾಗಿ ‘ಚಲೋ ಬೆಳಗಾವಿ’ ಪ್ರತಿಭಟನೆ ನಡೆಸಿದ್ದೇವೆ, ಸರ್ಕಾರ ನಮ್ಮ ಸಮಸ್ಯೆಗಳನ್ನು ಬಗೆಹರಿಸುವವರೆಗೂ ನಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ