ಬೇಲೂರು: 900 ವರ್ಷಗಳ ಗತಐತಿಹಾಸಿಕ ಹಿನ್ನಲೆಯನ್ನು ಹೊಂದಿರ ಬೇಲೂರಿನಲ್ಲಿ ನೆನಗುದ್ದಿಗೆ ಬಿದ್ದ ಹೊಯ್ಸಳ ಮಹೋತ್ಸವ ಆಚರಿಸುವಂತೆ ನಾನು ಎರಡು ಭಾರಿ ಸಂಬಂಧ ಪಟ್ಟವರಿಗೆ ಮನವಿ ಸಲ್ಲಿಸಿ ಸಧನದಲ್ಲಿ ಚರ್ಚೆ ನಡೆಸಲಾಗಿದೆ. ಆದರೂ ಸರ್ಕಾರ ಮಾತ್ರ ಬೇಲೂರಿನ ಮೇಲೆ ಮಲತಾಯಿ ಧೋರಣೆ ಅನುಸರಣೆ ಮಾಡುತ್ತಿದೆ ಈ ಬಗ್ಗೆ ಹೋರಾಟದ ಮೂಲಕವೇ ಉತ್ತರವನ್ನು ನೀಡಲಾಗುತ್ತದೆ ಎಂದು ಬೇಲೂರು ಶಾಸಕ ಹೆಚ್.ಕೆ.ಸುರೇಶ್ ಎಚ್ಚರಿಕೆ ನೀಡಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ದಿನದ ಬಗ್ಗೆ ಕರೆದ ಪೂರ್ವಭಾವಿ ಸಭೆಯಲ್ಲಿ ತಾ.ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳು ಹಾಲಪ್ಪ ಪ್ರಾಸ್ತಾಪಿಸಿದ ಹೊಯ್ಸಳ ಮಹೋತ್ಸವ ನಡೆಸಲು ಜಿಲ್ಲಾಡಳಿತ ಮತ್ತು ಸರ್ಕಾರದ ತೀವ್ರ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸಕ ಹೆಚ್.ಕೆ.ಸುರೇಶ್ ಸರ್ಕಾರ ಈಗಾಗಲೇ ವರಮಾನ ಬರುತ್ತದೆ ಎಂದು ದಸರಾ ಮತ್ತು ಹಾಸನಾಂಬೆ ಜಾತ್ರೆಯನ್ನು ಅದ್ದೂರಿ ಮಾಡುತ್ತಿದೆ.
ಆದರೆ ಬೇಲೂರಿನಲ್ಲಿ ವರಮಾನ ಇಲ್ಲದ ಕಾರಣದಿಂದ ಅತಿವೃಷ್ಟಿ-ಅನಾವೃಷ್ಟಿ ನೆಪ ಹೇಳುತ್ತಿದೆ. ಪ್ರಸಕ್ತ ವರ್ಷದಲ್ಲಿಯೇ ಹೊಯ್ಸಳ ಮಹೋತ್ಸವ ಮತ್ತು ಹಲ್ಮಿಡಿಯಲ್ಲಿ ಉತ್ಸವ ನಡೆಸಬೇಕು ಇಲ್ಲವಾದರೆ ನಾವೇ ಇಲ್ಲಿನ ಕನ್ನಡ ಪರ ಸಂಘಟನೆಗಳು ಮತ್ತು ಕನ್ನಡಾಭಿಮಾನಿಗಳ ಕಡೆ ಪ್ರತಿಭಟನೆ ನಡೆಸಲು ಸಿದ್ದವೆಂದ ಅವರು ನವಂಬರ್ 1 ರಂದು ನಡೆಯುವ ಕನ್ನಡ ರಾಜ್ಯೋತ್ಸವ ಅದ್ದೂರಿಯಿಂದ ನಡೆಯಬೇಕಿದೆ. ಪಾರದರ್ಶಕವಾಗಿ ಪ್ರಶಸ್ತಿ ಅಯ್ಕೆ, ಶಿಷ್ಟಚಾರದಂತೆ ಸಭೆ ನಡೆಸಬೇಕಿದೆ ಹಾಗೂ ಬೇಲೂರು ಕ್ರೀಡಾಂಗಣಕ್ಕೆ ಹೊಯ್ಸಳ ಎಂದು ನಾಮಕರಣ ಮಾಡುವ ಬಗ್ಗೆ ತಿಳಿಸಿದರು.
ತಹಸೀಲ್ದಾರ್ ಎಂ.ಮಮತ ಮಾತನಾಡಿ, ಕಳೆದ ವರ್ಷ ಶಾಸಕರ ಮಾರ್ಗದರ್ಶನದಂತೆ ಅದ್ದೂರಿಯಿಂದ ರಾಜ್ಯೋತ್ಸವ ನಡೆಸಲಾಗಿದೆ. ಈ ಭಾರಿ ಕೂಡ ಪಟ್ಟಣ ಕನ್ನಡ ಭಾವುಟಗಳಿಂದ ಶೃಂಗಾರವಾಗಿದೆ. ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳು ವಿದ್ಯುತ್ ದೀಪಾಲಂಕರ ಮಾಡಬೇಕಿದೆ. ಹಲ್ಮಿಡಿಯಿಂದ ಕನ್ನಡ ಜ್ಯೋತಿ ತರುವುದು, ಪ್ರಶಸ್ತಿ ನೀಡಲು ಅರ್ಜಿ ಆಹ್ವಾನ ನೀಡಲಾಗುತ್ತದೆ ಎಂದರು.
ಇದೇ ಸಭೆಯಲ್ಲಿ ಕಸಾಪ ಅಧ್ಯಕ್ಷ ಮಾ.ನ.ಮಂಜೇಗೌಡ, ಕರವೇ ಅಧ್ಯಕ್ಷ ಬೋಜೇಗೌಡ, ರಾಜಕುಮಾರ್ ಅಧ್ಯಕ್ಷ ತೀರ್ಥಕರ್. ತಾಲ್ಲೂಕು ಜಾನಪದ ಪರಿಷತ್ತು ಅಧ್ಯಕ್ಷ ವೈ.ಎಸ್.ಸಿದ್ದೇಗೌಡ, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷೆ ವೈ.ಆರ್.ಭಾರತೀಗೌಡ ಮತ್ತು ಮಾನವ ಹಕ್ಕುಗಳ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಎಂ.ಜೆ.ನಿಂಗರಾಜ್,ಲೋಕೇಶ್ ತಮ್ಮದೆಯಾದ ಸಲಹೆಗಳನ್ನು ನೀಡಿದರು.ಪೂರ್ವಭಾವಿ ಸಭೆಯಲ್ಲಿ ಪುರಸಭಾ ಅಧ್ಯಕ್ಷ ಎ.ಆರ್.ಆಶೋಕ್, ತಾ.ಪಂ. ಇಒ ವಸಂತಕುಮಾರ್, ಬಿಇಓ ರಾಜೇಗೌಡ, ಹಾಜರಿದ್ದರು.