ಬೇಲೂರು: ಮಹಾನ್ ಪುರುಷರ ಸಂದೇಶಗಳನ್ನು ನಾಡಿ ಜನಮನಕ್ಕೆ ತಲುಪಬೇಕು ಎಂಬ ಕಾರಣದಿಂದಲೇ ಸರ್ಕಾರ ಹತ್ತಾರು ಜಯಂತಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಕೇವಲ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿದರೆ ಸಾಲದು ಅವರ ಸಂದೇಶಗಳ ಆಶೋತ್ತರಗಳು ಪ್ರಮುಖವಾಗಿ ಯುವಜನತೆಗೆ ಮುಟ್ಟಬೇಕಿದೆ ಎಂದು ಬೇಲೂರು ತಹಸೀಲ್ದಾರ್ ಎಂ.ಮಮತ ಕರೆ ನೀಡಿದರು.
ನಗರದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಪುರಸಭೆ ಹಾಗೂ ಹಿಂದುಳಿದ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಡಿ.ದೇವರಾಜ ಅರಸುರವರ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟನೆ ನಡೆಸಿ ಮಾತನಾಡಿದ ಅವರು ಅರಸುರವರು ಅಂದಿನಕಾಲಘಟ್ಟದಲ್ಲಿ ಉತ್ತಮ ಶಿಕ್ಷಣ ಪಡೆದು ಕೃಷಿಯ ಬಗ್ಗೆ ಒಲವು ಹೊಂದುವ ಮೂಲಕ ಕ್ರಮೇಣ ರಾಜಕೀಯ ರಂಗಕ್ಕೆ ಪಾದಾರ್ಪಣೆ ನಡೆಸಿ, ದೀರ್ಘಕಾಲದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಉಳುವವನೆ ಭೂಮಿಯ ಒಡೆಯ, ಮಲ ಹೊರುವ ಪದ್ದತಿ ನಿಷೇದ ಸೇರಿದಂತೆ ದೇಶ ಕಂಡ ಅಪರೂಪ ಯೋಜನೆಗಳನ್ನು ರೂಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಹಿಂದುಳಿದ ವರ್ಗ ನೇತಾರರಾಗಿ ಬಡವರು, ನಿರ್ಗತಿಕರಿಗೆ ಸಹಾಯ ನೀಡುವ ಕಾರ್ಯಕ್ರಮಗಳನ್ನು ರೂಪಿಸಿದ್ದು, ಇಂದಿಗೂ ಕೆಲವು ಯೋಜನೆಗಳು ಜಾರಿಯಲ್ಲಿವೆ. ವಿಶೇಷವಾಗಿ ಉತ್ತಮ ಸಂಸದಿಯ ಪಟುವಾಗಿದ್ದ ಅರಸುರವರು ವಿಚಾರಧಾರೆಗಳು ಮತ್ತು ಅವರಲ್ಲಿ ಜನಪರ ಮತ್ತು ಸಾಮಾಜಿಕ ಚಿಂತನೆಗಳು ಯುವ ಜನತೆಗೆ ತಲುಪಬೇಕಿದೆ ಆಗ ಮಾತ್ರ ಇಂತಹ ಸಮಾರಂಭಗಳು ಅರ್ಥಪೂರ್ಣವಾಗಿ ನಡೆಯುತ್ತವೆ ಎಂದರು.
ಬೇಲೂರು ಪುರಸಭಾ ಅಧ್ಯಕ್ಷ ಎ.ಆರ್.ಆಶೋಕ್ ಮಾತನಾಡಿ, ಡಿ.ದೇವರಾಜು ಅರಸುರವರು ಮುತ್ಸದ್ದಿ, ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದರು. ಅವರಿಂದಾದ ಅಭಿವೃದ್ಧಿ ಕೆಲಸಗಳು ಮತ್ತು ಜನಪರ ಯೋಜನೆಗಳು ಮಾದರಿಯಾಗಿದೆ. ದೂರದೃಷ್ಟಿ ರಾಜಕಾರಣಿ ಎಂದೇ ಹೆಸರು ಪಡೆದ ಅರಸುರವರು ಗ್ರಾಮೀಣರ ಪಾಲಿನ ದೇವರು ಎಂದು ಕರೆಯಬಹುದು ಇಂತಹ ಮಹಾನ್ ಪುರುಷರ ಜಯಂತಿಗಳ ಕಾರ್ಯಕ್ರಮಗಳು ಸಮಯಕ್ಕೆ ತಕ್ಕಂತೆ ನಡೆಸಬೇಕಿದೆ. ತಾಲ್ಲೂಕು ಆಡಳಿತ ಈ ಬಗ್ಗೆ ಚಿಂತನೆ ಮಾಡಬೇಕಿದೆ,.ಪ್ರಮುಖವಾಗಿ ಬೇಲೂರು ಶಾಸಕರ ಬಗ್ಗೆ ನಮಗೆ ಅಪಾರ ಗೌರವಿದೆ.
ಅವರ ಅಭಿವೃದ್ಧಿ ಕಾರ್ಯಕ್ಕೆ ಸಹಮತವಿದೆ. ಆದರೆ ಕಾರ್ಯಕ್ರಮಗಳನ್ನು ನೌಕರರನ್ನು ಕಾಯಿಸುವುದು ನಿಜಕ್ಕೂ ಶೋಚನೀಯ, ಇದ್ದರಿಂದ ಸಾರ್ವಜನಿಕರ ಕೆಲಸಗಳು ತೀವ್ರ ವಿಳಂಭವಾಗುತ್ತದೆ ಎಂದು ಶಾಸಕರಿಗೆ ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಉಪನ್ಯಾಸ ವನ್ನು ಸಹ ಶಿಕ್ಷಕ ಟಿ.ಡಿ.ತಮ್ಮಣ್ಣಗೌಡ ನಡೆಸಿಕೊಟ್ಟರು. ಉಳಿದಂತೆ ತಾಲ್ಲೂಕುಪಂಚಾಯಿತಿ ಇಒ ಸತೀಶ್, ಬಿಸಿಎಂಇಲಾಖೆ ನಟರಾಜ್, ಕೆಡಿಪಿ ಸದಸ್ಯರಾದ ಚೇತನ್, ನಂದೀಶ್, ನವೀನ್, ಮುಖ್ಯಾಧಿಕಾರಿ ಸುಜಯ್ಕುಮಾರ್ ಹಾಜರಿದ್ದ ಕಾರ್ಯಕ್ರಮದ ನಿರೂಪಣೆಯನ್ನು ಉಪನ್ಯಾಸಕ ಲಕ್ಷ್ಮಿನಾರಾಯಣ ನಡೆಸಿದರು. ಬಳಿಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಸಲಾಯಿತು.