ಬೇಲೂರು: ನಗರದ ಸಮೀಪದಲ್ಲಿ ನಿರ್ಮಿಸಿರುವ ಯಗಚಿ ಜಲಾಶಯ ದೇಶವಾದ ಚಿಕ್ಕಮಂಗಳೂರು ಮೂಡಿಗೆರೆ ಗೆಂಡೆಹಳ್ಳಿ ಭಾಗದಲ್ಲಿ ಎಡಬಿಡದೆ ಸುರಿದ ಭಾರಿ ಮಳೆಯಿಂದಾಗಿ ನಗರದ ಸಮೀಪ ನಿರ್ಮಿಸಿರುವ ಯಗಚಿ ಜಲಾಶಯ ಸಂಪೂರ್ಣ ಭರ್ತಿಯಾದ ಹಿನ್ನೆಲೆ ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್ ಕೆ ಸುರೇಶ್ ಜಲಾಶಯಕ್ಕೆ ಭೇಟಿ ನೀಡಿ ಬಾಗಿನ ಸಮರ್ಪಿಸಿದರು
ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್ ಕೆ ಸುರೇಶ್ ಮಾತನಾಡಿ, ತಾಲೂಕಿನ ಜೀವನದಿ ಯಗಚಿ ಜಲಾಶಯ ಭರ್ತಿಯಾಗಿರುವುದು ಅತ್ಯಂತ ಸಂತೋಷಕರವಾಗಿದ್ದು ಹೆದರಿ ಜಲಾನಾ ಪ್ರದೇಶದ ರೈತರಿಗೆ ಮತ್ತು ಹಳೇಬೀಡು, ಮತ್ತು ಅಡಗೂರು ಭಾಗದ ಕೆರೆಗಳಿಗೆ ನೀರು ಹರಿಸಲಾಗುವುದು ಚಿಕ್ಕಮಂಗಳೂರು ಬೇಲೂರು ಮತ್ತು ಅರಸೀಕೆರೆ ತಾಲೂಕಿನ ಗ್ರಾಮಗಳಿಗೆ ಕುಡಿಯುವ ನೀರಿಗೆ ಹೆಚ್ಚಿನ ಅನುಕೂಲ ಆಗಲಿದೆ ಎಂದು ಹೇಳಿದರು.
ಶೀಘ್ರದಲ್ಲಿಯೇ ಜಲಸಂಪನ್ಮೂಲ ಸಚಿವರು ಜಿಲ್ಲಾ ಉಸ್ತುವಾರಿ ಸಚಿವರು ಮಠಾಧೀಶರ ಸಮ್ಮುಖದಲ್ಲಿ ಜಲಾಶಯಕ್ಕೆ ಬೃಹತ್ ಮಟ್ಟದ ಬಾಗಿನ ಪೂಜೆ ನೆರವೇರಿಸಲಾಗುವುದು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಎಂ ಮಮತಾ. ಗೆಳತಿ ನೀರಾವರಿ ಇಲಾಖೆ ಅಧಿಕಾರಿ ಪುನೀತ್. ಬಿಜೆಪಿ ಮುಖಂಡರಾದ ಸಿ. ಎಸ್ ಪ್ರಕಾಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.