ಬೆಂಗಳೂರು: ಹೈ ಗ್ರೌಂಡ್ಸ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ವಕ್ಫ್ ಬೋರ್ಡ್ ಬಳಿ ಅಪರಿಚಿತ ವಾಹನ ಮೋಟಾರ್ ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿದ್ದಾನೆ.
ಚಂದ್ರಿಕಾ ಹೋಟೆಲ್ ಕಡೆಯಿಂದ ಕಲ್ಪನಾ ಜಂಕ್ಷನ್ ಬಳಿ ಹೋಗುವ ಸಮಯದಲ್ಲಿ ಅಪರಿಚಿತ ವಾಹನ ಹೋಂಡಾ ಡಿಯೋ ಮೋಟಾರ್ ಸವಾರ ಆಯುಷ್ ಅಪ್ಪಯ್ಯ(21) ಎಂಬುವರ ತಲೆಗೆ ತೀವ್ರವಾದ ಗಾಯ ಸಂಭವಿಸಿದ ಪರಿಣಾಮ ಸಾರ್ವಜನಿಕರ ಸಹಾಯದಿಂದ ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲಾಗಿ ಆಸ್ಪತ್ರೆ ವೈದ್ಯರು ಪರೀಕ್ಷಿಸಿ ನಂತರ ದಾರಿಯಲ್ಲಿಯೇ ಮೃತಪಟ್ಟಿರುತ್ತಾನೆ ಎಂದು ತಿಳಿಸಿರುತ್ತಾರೆ.ಹೈ ಗ್ರೌಂಡ್ಸ್ ಸಂಚಾರಿ ಪೊಲೀಸರು ರಸ್ತೆಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಗಳಲ್ಲಿ ಅಪರಿಚಿತ ವಾಹನದ ಬಗ್ಗೆ ಪತ್ತೆ ಹಚ್ಚಲು ತನಿಖೆ ಕೈಗೊಂಡಿರುತ್ತಾರೆ.



