ಬೆಂಗಳೂರು: ಕಾರ್ಬನ್ ತೆರೇಸಾ ಶಾಲೆಗೆ ಶಾಲಾ ಸಮವಸ್ತ್ರದಲ್ಲಿ ತಂದೆಯ ಜೊತೆಯಲ್ಲಿ ಮೋಟರ್ ಬೈಕ್ ನಲ್ಲಿ ಹೋಗುತ್ತಿದ್ದ ಸಮಯದಲ್ಲಿ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಶಾಲಾ ಬಾಲಕ ಮೃತಪಟ್ಟಿರುವ ಘಟನೆ ವೈಟ್ಫೀಲ್ಡ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಇಂದು ಬೆಳಿಗ್ಗೆ ಏಳು ವರೆ ಸುಮಾರಿಗೆ ಗಜೇಂದ್ರ ಎಂಬ ಹತ್ತು ವರ್ಷದ ಗಂಡು ಮಗು ತಮ್ಮ ತಂದೆ ರಾಜೇಶ್ ಜೊತೆಯಲ್ಲಿ ಮೋಟರ್ ಬೈಕ್ ನಲ್ಲಿ ಹೋಗುತ್ತಿರುವ ಸಮಯದಲ್ಲಿ ವಾಟರ್ ಟ್ಯಾಂಕರ್ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಮಗು ಮೃತಪಟ್ಟಿರುತ್ತದೆ ತಂದೆಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ.ಈ ಘಟನೆ ವೈಟ್ಫೀಲ್ಡ್ ಸಂಚಾರಿ ಪೋಲೀಸ್ ಠಾಣಾ ವ್ಯಾಪ್ತಿಯ ಹಗದೂರಿನ ಮುಖ್ಯರಸ್ತೆಯಲ್ಲಿ ಜರುಗಿದೆ.