ಬೆಂಗಳೂರು: ಬೆಂಗಳೂರಿನ ಐಶಾರಾಮಿ ಬೈಕ್ ಶೋರೂಂ ನಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿಲಕ್ಷಾಂತರ ಮೌಲ್ಯದ ಬೈಕ್ ಗಳು ಸುಟ್ಟು ಕರಕಲಾಗಿರುವ ಘಟನೆ ಮಹದೇವಪುರ ಬಿ.ನಾರಾಯಣಪುರದಲ್ಲಿ ನಡೆದಿದೆ.
ಶಾರ್ಟ್ ಸಕ್ರ್ಯೂಟ್ ನಿಂದ ಹೊತ್ತಿಕೊಂಡಿದೆ ಎನ್ನಲಾಗಿದ್ದು, ಇಡೀ ಶೋರೂಂ ಬೆಂಕಿ ವ್ಯಾಪಿಸಿ ಶೋರೂಂ ನಲ್ಲಿದ್ದ ಬೈಕ್ಗಳು ಬೆಂಕಿಗಾಹುತಿಯಾಗಿ ಸುಟ್ಟು ಕರಕಲಾಗಿದೆ.
ಸುಮಾರು 50 ಕ್ಕೂ ಹೆಚ್ಚು ಬೈಕ್ ಗಳು ಬೆಂಕಿಗಾಹುತಿಯಾಗಿವೆ.
ಪಕ್ಕದ ಟ್ರಯಂಫ್ ಶೋ ರೂಂರಿಗೂ ತಗುಲಿದೆ, ಅಷ್ಟರೊಳಗೆ ಅಗ್ನಿಶಾಮಕ ಸಿಬ್ಬಂದಿಗಳು ಟ್ರಯಂಪ್ ಶೋ ರೂಂನ ಬೆಂಕಿ ನಂದಿಸಿದ್ದಾರೆ.ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳು ಬೆಂಕಿ ಕಾಣಿಸಿಕೊಳ್ತಿದ್ದಂತೆ ಹೊರ ಓಡಿ ಬಂದಿದ್ದಾರೆ.