ಬೆಂಗಳೂರು: ನಗರದ ಬೈಯಪ್ಪನಹಳ್ಳಿಯ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬಳಿ ನಗರದ ಮೊದಲ ಎಲಿವೇಟೆಡ್ ರೋಟರಿ ಮೇಲ್ಸೇತುವೆ ನಿರ್ಮಾಣದ ಗುತ್ತಿಗೆ ಕೆಲಸ ಅಂತಿಮಗೊಳ್ಳುವ ಬಗ್ಗೆ ಪ್ರಶ್ನೆಗಳೆದ್ದಿದೆ. ಎರಡನೆ ಸುತ್ತಿನ ಟೆಂಡರ್ನಲ್ಲಿ ಬಿಡ್ದಾರರು ಅತಿ ಹೆಚ್ಚಿನ ಬೆಲೆ ಸೂಚಿಸಿದ್ದರಿಂದ ಉಂಟಾಗುವ ತೊಡಕಿನಿಂದ ಹಿಡಿದು, ರಾಜ್ಯ ಸರ್ಕಾರವು ಕನಿಷ್ಟ ಬಿಡ್ ನ್ನು ಸ್ವೀಕರಿಸಲು ಅಥವಾ ಮರು-ಟೆಂಡರ್ಗೆ ಹೋಗಲು ಒತ್ತಾಯಿಸಬಹುದು. ಒಂದು ವಾರದಲ್ಲಿ ಸಚಿವ ಸಂಪುಟದಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಬಹುದು.
IOC ಜಂಕ್ಷನ್ನಲ್ಲಿ ಮೇಲ್ಸೇತುವೆಯನ್ನು ಫೆಬ್ರವರಿ 2024 ರ ಬಜೆಟ್ನಲ್ಲಿ 380 ಕೋಟಿ ರೂಪಾಯಿ ವೆಚ್ಚದಲ್ಲಿ (ಜಿಎಸ್ಟಿ ಸೇರಿದಂತೆ) ಮಂಜೂರು ಮಾಡಲಾಗಿದೆ. ಪ್ರಯಾಣಿಕರಿಗೆ ಎಸ್ ಎಂವಿಟಿ ನಿಲ್ದಾಣಕ್ಕೆ ಸುಲಭ ಪ್ರವೇಶವು ಪ್ರಮುಖ ಉದ್ದೇಶವಾಗಿತ್ತು.
ಹೆಚ್ಚುವರಿಯಾಗಿ, ಬಾಣಸವಾಡಿ, ಮಾರುತಿ ಸೇವಾ ನಗರ, ಕಾಮನಹಳ್ಳಿ, ರಾಮಮೂರ್ತಿ ನಗರ ಮತ್ತು ಬೈಯಪ್ಪನಹಳ್ಳಿ ನಿವಾಸಿಗಳು ಟ್ರಾಫಿಕ್ ದಟ್ಟಣೆಯ ಪರಿಹಾರದಿಂದ ಪ್ರಯೋಜನ ಪಡೆಯುತ್ತಾರೆ ಎಂದು ಸ್ಥಳೀಯರು ಹೇಳುತ್ತಾರೆ. ಮೇಲ್ಸೇತುವೆ 4.5 ಕಿ.ಮೀ ಉದ್ದದವರೆಗೆ ಸಾಗಲಿದ್ದು, ಮಾರುತಿ ಸೇವಾ ನಗರದಿಂದ ಬಾಣಸವಾಡಿ ಮುಖ್ಯ ರಸ್ತೆಗೆ ವೃತ್ತಾಕಾರದ ಜಂಕ್ಷನ್ನೊಂದಿಗೆ ಸಂಪರ್ಕ ಕಲ್ಪಿಸಲಿದೆ.
ಮೊದಲ ಸುತ್ತಿನ ಬಿಡ್ಡಿಂಗ್ನಲ್ಲಿ ಒಬ್ಬನೇ ಬಿಡ್ದಾರರಿದ್ದು, ಅದನ್ನು ರದ್ದುಗೊಳಿಸಬೇಕಾಗಿದ್ದರೆ, ಎರಡನೇ ಸುತ್ತಿನ ಟೆಂಡರ್ನಲ್ಲಿ ಬಿಡ್ ಸಲ್ಲಿಸಿದ ನಾಲ್ಕು ಕಂಪನಿಗಳು ದುಬಾರಿ ದರವನ್ನು ನಮೂದಿಸಿವೆ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.