ರಾಮನಗರ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಟ್ಟಿಹಾಕಲು ಏರ್ಪಟ್ಟ ಬಿಜೆಪಿ – ಜೆಡಿಎಸ್ ಮೈತ್ರಿ ಯಶಸ್ವಿ ಏನೋ ಆಯಿತು ಆದರೇ ಹೆಚ್.ಡಿ ಕುಮಾರಸ್ವಾಮಿ ಯಿಂದ ತೆರವಾದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಎದುರಾಗಿರುವ ಉಪಚುನಾವಣೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಉಪಚುನಾವಣೆಯ ದಿನಾಂಕ ಘೋಷಣೆ ಮುನ್ನವೇ ಕ್ಷೇತ್ರದ ಮೈತ್ರಿ ಮುಖಂಡರಲ್ಲಿ ಜಟಾಪಟಿ ಏರ್ಪಟ್ಟಿದೆ. ಈ ಜಟಾಪಟಿ ಚನ್ನಪಟ್ಟಣದಲ್ಲಿ ಮೈತ್ರಿಗೆ ಎಳ್ಳು ನೀರು ಬಿಡುವ ಲಕ್ಷಣಗಳು ಗೋಚರವಾಗುತ್ತಿವೆ.ಅದಕ್ಕೆ ಕಾರಣ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಜಯಮುತ್ತು ನಡೆಸಿದ ಸುದ್ದಿಗೋಷ್ಠಿ ಮೊದಲ ಹಂತದ ಮೈತ್ರಿ ಟಿಕೆಟ್ ಜಟಾಪಟಿಗೆ ಕಾರಣವಾಗಿದೆ.
ಇದು ಜೆಡಿಎಸ್ನ ಭದ್ರಕೋಟೆ ಆಗಿದೆ ಜೊತೆಗೆ ಕ್ಷೇತ್ರದಲ್ಲಿ ಸಂಪ್ರಾದಾಯಕ ಮತಗಳು ಇವೆ, ಜೆಡಿಎಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಅನಿವಾರ್ಯತೆ ಇದೆ, ಪಕ್ಷದ ಕಾರ್ಯಕರ್ತರು-ಮುಖಂಡರ ಉಳಿವಿಗಾಗಿ ಮೈತ್ರಿ ಟಿಕೆಟ್ ಉಳಿಸಿಕೊಳ್ಳಬೇಕಿದೆ. ಹಾಗಾಗಿ ಜೆಡಿಎಸ್ನ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುವಂತೆ ಒತ್ತಾಯಿಸಿದೆ. ಜಯಮುತ್ತು ಹೇಳಿಕೆ ಬೆನ್ನೆಲೆ ಸ್ಥಳೀಯ ಬಿಜೆಪಿ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರದ ಮೈತ್ರಿ ಟಿಕೆಟ್ ಅನ್ನು ಬಿಜೆಪಿಗೆ ನೀಡಬೇಕು ನಮ್ಮ ನಾಯಕರಾದ ಸಿ.ಪಿ ಯೋಗೇಶ್ವರ್ ಮೈತ್ರಿ ಅಭ್ಯರ್ಥಿಯಾಗಬೇಕು ಇಲ್ಲವಾದರೆ ನಾವು ಫ್ರೆಂಡ್ಲಿ ಫೈಟ್ಗೂ ಸಿದ್ದ, ದೇಶದಲ್ಲಿ ನಮ್ಮ ಮೈತ್ರಿ ಮುಂದುವರಿಯಲಿ ಆದರೇ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ದಿಸಿ ಫ್ರೆಂಡ್ಲಿ ಫೈಟ್ಗೆ ಸಿದ್ದ ಎಂದು ಸವಾಲ್ ಎಸೆದಿದ್ದಾರೆ. ಆದರೆ, ಉಪ ಚುನಾವಣೆಗೆ ಯಾರಿಗೆ ಟಿಕೆಟ್ ಎಂಬ ಸುಳಿವನ್ನು ಯಾವ ಪಕ್ಷಗಳೂ ಬಿಟ್ಟುಕೊಟ್ಟಿಲ್ಲ. ಸ್ಥಳೀಯ ಮುಖಂಡರ ಈ ಗೊಂದಲ ಕ್ಷೇತ್ರದಲ್ಲಿ ಮೈತ್ರಿಗೆ ಎಳ್ಳು ನೀರು ಬಿಡುವುದು ಗ್ಯಾರಂಟಿ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸಿ.ಪಿ.ಯೋಗೇಶ್ವರ್ ಅವರಿಗೆ ಹೊಸ ಸವಾಲನ್ನು ತಂದೊಡ್ಡಿದೆ. ಒಂದು ವೇಳೆ ಸಿಪಿವೈಗೆ ಅವಕಾಶ ತಪ್ಪಿದರೆ ಯೋಗೇಶ್ವರ್ ರಾಜಕೀಯ ನಡೆ ಮುಂದೆ ಏನು ಎನ್ನುವುದು ಸಹ ಕ್ಷೇತ್ರದಲ್ಲಿ ಜನರು ಚರ್ಚಿಸುತ್ತಿದ್ದು, ಕೈ ಅಭ್ಯರ್ಥಿಯನ್ನು ಮಣಿಸಲು ಸಿ.ಪಿ.ಯೋಗೇಶ್ವರ್ ಅಭ್ಯರ್ಥಿಯಾದರೆ ಮಾತ್ರ ಸಾಧ್ಯ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ಮೈತ್ರಿ ಗೊಂದಲದ ಲಾಭ ಪಡೆಯಲು ಡಿಸಿಎಂ ಡಿ.ಕೆ.ಶಿವಕುಮಾರ್ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಮೈತ್ರಿಯಲ್ಲಿನ ಭಿನ್ನ ಮತದ ಲಾಭ ಪಡೆದು ಕ್ಷೇತ್ರವನ್ನ ಕೈ ವಶ ಮಾಡಿಕೊಳ್ಳಲು ಪ್ಲಾನ್ ರೂಪಿಸುತ್ತಿದ್ದಾರೆ ಎನ್ನಲಾಗಿದೆ.ಹೆಚ್.ಡಿ.ಕುಮಾರಸ್ವಾಮಿಗೆ ಈ ಎಲ್ಲಾ ಬೆಳವಣಿಗೆಯ ಬಗ್ಗೆ ಮಾಹಿತಿ ಇದ್ದರೂ ಸಹ ಸ್ಥಳೀಯ ಮುಖಂಡರಿಗೆ ಯಾವುದೇ ನಿರ್ದೇಶನ ನೀಡದಿರುವುದು ಚರ್ಚೆಗೆ ಕಾರಣವಾಗಿದ್ದು, ಕ್ಷೇತ್ರದಲ್ಲಿನ ಮೈತ್ರಿ ಟಿಕೆಟ್ ಗೊಂದಲಕ್ಕೆ ಹೆಚ್.ಡಿ ಕುಮಾರಸ್ವಾಮಿ ಅವರೇ ತೆರೆ ಎಳೆಯಬೇಕಿದೆ.ತ್ರಿಕೋನ ಸ್ಪರ್ಧೆ ಏರ್ಪಟ್ಟರು ಅಚ್ಚರಿ ಪಡುವಂತಿಲ್ಲ, ಕ್ಷೇತ್ರ ಕೈ ವಶವಾಗುತ್ತಾ ಇಲ್ಲ ಮೈತ್ರಿ ಅಭ್ಯರ್ಥಿಯನ್ನೇ ಗೆಲ್ಲಿಸಿಕೊಳ್ಳುತ್ತಾರಾ ಕಾದು ನೋಡಬೇಕಿದೆ.