ಪುಣೆ: ಆತಿಥೇಯ ಭಾರತ ವಿರುದ್ಧ ಪುಣೆಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪ್ರವಾಸಿ ನ್ಯೂಜಿಲೆಂಡ್, ಬ್ಯಾಟಿಂಗ್ ಆರಂಭಿಸಿದೆ.
ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ನ್ಯೂಜಿಲೆಂಡ್ ತಂಡ 11 ಓವರ್ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 38 ರನ್ ಗಳಿಸಿದೆ.
ಅನುಭವಿ ಡೆವೊನ್ ಕಾನ್ವೆ ಜೊತೆ ಇನಿಂಗ್ಸ್ ಆರಂಭಿಸಿದ ನಾಯಕ ಟಾಮ್ ಲೇಥಮ್ (15) ಅವರನ್ನು ಸ್ಪಿನ್ನರ್ ಆರ್. ಅಶ್ವಿನ್ ಎಲ್ಬಿ ಬಲೆಗೆ ಬೀಳಿಸಿದ್ದಾರೆ. ಕಾನ್ವೆ (20) ಹಾಗೂ ವಿಲ್ ಯಂಗ್ (2) ಕ್ರೀಸ್ನಲ್ಲಿದ್ದಾರೆ.ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಗೆದ್ದಿರುವ ಲಥಾಮ್ ಪಡೆ, ಈ ಪಂದ್ಯವನ್ನೂ ಜಯಿಸಿ, ಸರಣಿ ವಶಪಡಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಆದರೆ, ಇಲ್ಲಿ ಗೆದ್ದು ಪುಟಿದೇಳುವ ವಿಶ್ವಾಸದಲ್ಲಿ ರೋಹಿತ್ ಶರ್ಮಾ ಬಳಗವಿದೆ.
ಭಾರತ ತಂಡದಲ್ಲಿ ಮೂರು ಬದಲಾವಣೆರನ್ ಗಳಿಸಲು ಪರದಾಡುತ್ತಿರುವ ಕನ್ನಡಿಗ ಕೆ.ಎಲ್.ರಾಹುಲ್ ಅವರನ್ನು ಭಾರತ ತಂಡದಿಂದ ಕೈಬಿಡಲಾಗಿದೆ. ಯುವ ಬ್ಯಾಟರ್ ಶುಭಮನ್ ಗಿಲ್ ತಂಡ ಕೂಡಿಕೊಂಡಿದ್ದಾರೆ. ರಾಹುಲ್ ಮಾತ್ರವಲ್ಲ ವೇಗಿ ಮೊಹಮ್ಮದ್ ಸಿರಾಜ್ ಮತ್ತು ‘ಚೈನಾಮನ್’ ಕುಲದೀಪ್ ಯಾದವ್ಗೂ ಕೋಕ್ ನೀಡಲಾಗಿದೆ.
ಕಳೆದ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾದ ಸಿರಾಜ್ ಬದಲು ಮಧ್ಯಮ ವೇಗಿ ಆಕಾಶ್ ದೀಪ್ ಮತ್ತು ಯಾದವ್ ಬದಲು ಆಲ್ರೌಂಡರ್ ವಾಷಿಂಗ್ಟನ್ ಸುಂದರ್ಗೆ ಅವಕಾಶ ಸಿಕ್ಕಿದೆ.ಕಳೆದ ಪಂದ್ಯದಲ್ಲಿ ಮಿಂಚಿದ್ದ ವೇಗಿ ಮ್ಯಾಟ್ ಹೆನ್ರಿ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಅವರ ಬದಲು ಆಲ್ರೌಂಡರ್ ಮಿಚೇಲ್ ಸ್ಯಾಂಟ್ನರ್ ಅವರು ನ್ಯೂಜಿಲೆಂಡ್ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.