ಇಕ್ಸಾನ್ ಸಿಟಿ (ಕೊರಿಯಾ): ಅನಿರೀಕ್ಷಿತ ಫಲಿತಾಂಶದಲ್ಲಿ ಮೂರನೇ ಶ್ರೇಯಾಂಕದ ಆಟಗಾರ ಚಿ ಯು ಜೆನ್ ಅವರಿಗೆ ಗುರುವಾರ ಆಘಾತ ನೀಡಿದ ಭಾರತದ ಕಿರಣ್ ಜಾರ್ಜ್ ಅವರು ಕೊರಿಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ಕ್ವಾರ್ಟರ್ಫೈನಲ್ ಪ್ರವೇಶಿಸಿದರು.
ಮೂರು ಗೇಮ್ಗಳನ್ನು ಕಂಡ ಎರಡನೇ ಸುತ್ತಿನ ಪಂದ್ಯದಲ್ಲಿ ಕಿರಣ್ ೨೧-೭, ೧೯-೨೧, ೨೧-೧೭ ರಿಂದ ವಿಶ್ವ ಕ್ರಮಾಂಕದ ೩೧ನೇ ಸ್ಥಾನದಲ್ಲಿರುವ ಚೀನಾ ತೈಪೆ ಆಟಗಾರನನ್ನು ಹಿಮ್ಮೆಟ್ಟಿಸಿದರು. ಪಂದ್ಯ ಒಂದೂಕಾಲು ಗಂಟೆ ನಡೆಯಿತು. ವಿಶ್ವ ಕ್ರಮಾಂಕದಲ್ಲಿ ೪೪ನೇಸ್ಥಾನದಲ್ಲಿರುವ ಕಿರಣ್ ಎಂಟರ ಘಟ್ಟದ ಪಂದ್ಯದಲ್ಲಿ ಜಪಾನ್ನ ತಕುಮಾ ಒಬಯಾಶಿ ವಿರುದ್ಧ ಆಡಲಿದ್ದಾರೆ. ಕಿರಣ್, ಈ ಟೂರ್ನಿಯಲ್ಲಿ ಭಾಗವಹಿಸಿರುವ ಭಾರತದ ಏಕೈಕ ಆಟಗಾರನಾಗಿದ್ದಾರೆ.
ಬ್ಯಾಡ್ಮಿಂಟನ್: ಎಂಟರ ಘಟ್ಟಕ್ಕೆ ಕಿರಣ್ ಜಾರ್ಜ್
