ಮುಂಬೈ: ಇವಿಎಂ ಮೇಲೆ ನಂಬಿಕೆಯಿಲ್ಲದೆ ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ಬ್ಯಾಲೆಟ್ ಪೇಪರ್ ಮುಖಾಂತರ ಅಣುಕು ಮತದಾನ ಮಾಡುತ್ತಿರುವ ಘಟನೆ ನಡೆದಿದೆ.
ಸೊಲ್ಲಾಪುರದ ಮಡ್ವಕಾಡಿ ಗ್ರಾಮದಲ್ಲಿ ಗ್ರಾಮಸ್ಥರು ಬ್ಯಾಲೆಟ್ ಮುಖಾಂತರ ಅಣಕು ಮತದಾನ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಈ ಗ್ರಾಮದಲ್ಲಿ ಹೆಚ್ಚು ಮತ ಗಳಿಸಿತ್ತು.
ಅದರಿಂದಾಗಿ ಅಸಮಾಧಾನ ಹೊರ ಹಾಕಿದ್ದ ಗ್ರಾಮಸ್ಥರು ಚುನಾವಣಾ ಆಯೋಗದ ವಿರುದ್ಧವಾಗಿ ಅಣಕು ಮತದಾನ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ನಿಷೇಧಾಜ್ಞೆ ಹೇರಿರುವುದಾಗಿ ತಿಳಿದುಬಂದಿದೆ.