ಬ್ರಾಹ್ಮಣ ವಿದ್ಯಾರ್ಥಿ ನಿಲಯ ಹಳೆಯ ಸಹಪಾಠಿಗಳ ಪುನರ್ಮಿಲನ ಕಾರ್ಯಕ್ರಮ ಅದೊಂದು ವಸತಿನಿಲಯ ಒಂದರ ಹಳೆಯ ಸಹಪಾಠಿ ಗಳ ಪುನರ್ಮಿಲನ ಕಾರ್ಯಕ್ರಮ. ಭಾಗವಹಿಸಿದ ಎಲ್ಲರೂ 75 ದಾಟಿದವರು, ವಿವಿಧ ಹುದ್ದೆಗಳಲ್ಲಿದ್ದು ನಿವೃತ್ತರು. ತಾವಿದ್ದ ಕೊಠಡಿಗಳನ್ನು ನೋಡಿ ಸಂಭ್ರಮಿಸಿದರು.ಅರವತ್ತು ವರ್ಷಗಳ ಹಿಂದಿನ ತಮ್ಮ ಗೆಳೆಯರನ್ನು ನೋಡಿ ಗುರುತಿಸಿ ಏಕವಚನ ಪ್ರಯೋಗಕ್ಕೆ ಇಳಿದವರು. ಎರಡೂ ದಿನ ಅಲ್ಲಿಯೇ ವಾಸ್ತವ್ಯ ಮಾಡಿದರು . ನೆನಪುಗಳನ್ನು, ಬದುಕು ತಂದ ತಿರುವುಗಳನ್ನು ಹಂಚಿಕೊಂಡರು. ಕೆಲವರು ಸಪತ್ನೀಕರಾಗಿ ಆಗಮಿಸಿದ್ದರು.
ಇದೆಲ್ಲ ನಡೆದದ್ದು ಶಿವಮೊಗ್ಗ ದ 106 ವರ್ಷ ಹಳೆಯ ಬ್ರಾಹ್ಮಣ ವಿದ್ಯಾರ್ಥಿ ನಿಲಯ ದಲ್ಲಿ ಇದೇ 1 ಮತ್ತು 2 ರಂದು. ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿ, ಜಿಲ್ಲಾ ಅಧ್ಯಕ್ಷ ನಟರಾಜ ಭಾಗವತ್ ಅತಿಥಿ ಗಳನ್ನು ಕುರಿತು ಸಮುದಾಯದ ಹೊಣೆಗಾರಿಕೆ ಕುರಿತು ಮಾತನಾಡಿದರು. ಹೆಚ್.ಎನ್. ಶ್ಯಾಮ ಸುಂದರ ಮತ್ತು ಮಂಜುನಾಥ ಶಾಸ್ತ್ರಿ ಕಾರ್ಯಕ್ರಮ ನಿರ್ವಹಣೆ ನಡೆಸಿಕೊಟ್ಟರು.