ಪಿ.ವಾಸುಮೂರ್ತಿ
ಬೆಂಗಳೂರು: ಮಾಹಿತಿಯ ಪ್ರಕಾರ ವಿಧಾನಸೌಧ, ವಿಕಾಸ ಸೌಧ ಮತ್ತು ಶಾಸಕರ ಭವನಗಳಿಗೆ ತಮ್ಮ ಕೆಲಸ ಕಾರ್ಯಗಳಿಗೆ ಡಾಂಗುಡಿ ಇಡುತ್ತಿದ್ದ ಸಾಮಾನ್ಯ ಪ್ರಜೆಗಳ ಸಂಖ್ಯೆ ರಾಜ್ಯದಲ್ಲಿ ಮೂರು ಶಾಸಕರ ಕ್ಷೇತ್ರಗಳಿಗೆ ಬೈ ಎಲೆಕ್ಷನ್ ನಡೆಯುತ್ತಿರುವುದರಿಂದ
ಸಾರ್ವಜನಿಕರ ಭೇಟಿ ಕಡಿಮೆಯಾಗಿದೆ ಎಂದು ಡಿಸಿಪಿ ವಿಧಾನಸೌಧ ಮತ್ತು ವಿಕಾಸ ಸೌಧ ಹಾಗೂ ಶಾಸಕರ ಭವನಗಳ ಉಸ್ತುವಾರಿ ಇರುವ ಡಿಸಿಪಿ ಕರಿಬಸನಗೌಡ ತಿಳಿಸಿದರು.
ಚುನಾವಣೆ ಘೋಷಣೆಯಾದ ದಿನದಿಂದ ಸಾರ್ವಜನಿಕರ ಭೇಟಿ ಈ ಮೂರು ಕಡೆ ಕಡಿಮೆಯಾಗಿದೆ, ಅಂದಾಜು ದಿನ ನಿತ್ಯ ೭೦೦ ರಿಂದ ಸಾವಿರ ಜನ ಈ ಮೂರು ಕಡೆ ಭೇಟಿ ನೀಡುತ್ತಿದ್ದರು .
ಚನ್ನಪಟ್ಟಣ, ಸಂಡೂರು ಮತ್ತು ಹಾವೇರಿ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ಕೊರತೆ ಏನು ಕಾಣುತ್ತಿಲ್ಲ. ಕಾರಣ ಇತರ ಜಿಲ್ಲಾ ಪೊಲೀಸ್ ಹಾಗೂ ಕೆಎಸ್ಆರ್ಪಿ ಪಡೆಗಳನ್ನು ಚುನಾವಣಾ ಕರ್ತವ್ಯಕ್ಕೆ ವಿಶೇಷವಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ತೀರ್ಮಾನಿಸುತ್ತಾರೆ ಎಂದು ತಿಳಿಸಿದ್ದಾರೆ.
ಭದ್ರತಾ ಸಿಬ್ಬಂದಿ ಕೊರತೆಯಿಲ್ಲ
