ನೆಲಮಂಗಲ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನಲೆ ರಾಜ್ಯದಲ್ಲಿ ಸಂಚಾರ ಮಾಡುತ್ತಿರುವ ಕನ್ನಡ ಸಾಹಿತ್ಯ ರಥಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭದ್ರತೆ ನೀಡದೆ ಅವಮಾನಿಸಿರುವ ಘಟನೆ ನಡೆದಿದೆ.ನೆಲಮಂಗಲ ನಗರದಿಂದ ದಾಸನಪುರದವರೆಗೂ ನೆಲಮಂಗಲ ನಗರ ಪೊಲೀಸರು ಭದ್ರತೆ ನೀಡಿ ಮಾದನಾಯಕನಹಳ್ಳಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ದಾಸನಪುರದ ಬಳಿ ಒಂದು ಪೋಟೋ ತೆಗೆದುಕೊಂಡು ಸಹಿ ಪಡೆದು ಎಸ್ಕೆಪ್ ಆದ ಪೊಲೀಸರು ಅಂಚೇಪಾಳ್ಯದವರೆಗೂ ಪತ್ತೆಯೇ ಇಲ್ಲದಂತಾಗಿದ್ದಾರೆ.
ಇದರಿಂದ ಮಾಕಳಿ, ಮಾದನಾಯಕನಹಳ್ಳಿ, ಟಿಸಿಐ, ಮಾದವಾರ, ಅಂಚೇಪಾಳ್ಯದವರೆಗೂ ಬಾರಿ ಟ್ರಾಫಿಕ್ ಜಾಮ್ನಲ್ಲಿ ಕನ್ನಡ ಸಾಹಿತ್ಯದ ರಥ ಸಿಲುಕಿದ್ದು ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಟ್ರಾಫಿಕ್ನಿಂದ ಕನ್ನಡ ರಥವನ್ನು ಮುಂದೆ ಸಾಗಿಸಲು ಹರಸಾಹಸ ಪಟ್ಟಿದ್ದಾರೆ.
ಸರಕಾರದ ಆದೇಶವಿದ್ದರು ಕೂಡ ಮಾದನಾಯಕನಹಳ್ಳಿ ಪೊಲೀಸರು ನಿರ್ಲಕ್ಷ್ಯ ಕನ್ನಡ ಸಾಹಿತ್ಯ ರಥಕ್ಕೆ ಮಾಡಿದ ಅವಮಾನ ಎಂದು ಸಾರ್ವಜನಿಕರು ಹಾಗೂ ಕಸಾಪ ಪದಾಧಿಕಾರಿಗಳು ಆರೋಪಿಸಿದ್ದಾರೆ.ನೆಲಮಂಗಲ ನಗರದ ಗಡಿಯವರೆಗೂ ನೆಲಮಂಗಲ ಟೌನ್ ಪೊಲೀಸರು ಭದ್ರತೆ ನೀಡಿ ದಾಸನಪುರದ ಬಳಿ ಪೊಲೀಸರಿಗೆ ಹಸ್ತಾಂತರ ಮಾಡಿದರು. ಅಲ್ಲಿ ಪೋಟೋ ಪಡೆದ ಪೊಲೀಸರು ಮಾಕಳಿಯಿಂದ ನಾಪತ್ತೆಯಾದರು, ಸರ್ವಿಸ್ ರಸ್ತೆಯಲ್ಲಿ ಮಾಕಳಿಯಿಂದ ಅಂಚೇಪಾಳ್ಯದವರೆಗೂ ಟ್ರಾಫಿಕ್ ನಲ್ಲಿಯೇ ಸಾಗುವಂತಾಯಿತು.
ಮಾದನಾಯಕನಹಳ್ಳಿ ಪೊಲೀಸರು ನಿರ್ಲಕ್ಷ್ಯದಿಂದ ಸರಕಾರ ಆದೇಶದ ಉಲ್ಲಂಘನೆಯ ಜತೆ ಕನ್ನಡ ಸಾಹಿತ್ಯ ರಥಕ್ಕೆ ಮಾಡದ ಅವಮಾನವಾಗಿದೆ.
-ಪ್ರಕಾಶ್ ಮೂರ್ತಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ