ಭೋಪಾಲ್: ಮಧ್ಯಪ್ರದೇಶ ಪೊಲೀಸ್ ಶಸ್ತ್ರಾಗಾರದಲ್ಲೇ ಕಳ್ಳತನ ನಡೆದಿದ್ದು, 9ಎಂಎಂ ಪಿಸ್ತೂಲ್ ಹಾಗೂ ಸ್ವಯಂಚಾಲಿತ ರೈಫಲ್ ಗಳ 200 ಕಾರ್ಟ್ರಿಜ್ ಗಳು ನಾಪತ್ತೆಯಾಗಿವೆ.
ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಪೊಲೀಸ್ ವಿಶೇಷ ಸಶಸ್ತ್ರ ಪಡೆಗಳ ವಿಭಾಗದ ಶಸ್ತ್ರಾಗಾರಗಳಲ್ಲಿ ಈ ಕಳ್ಳತನ ನಡೆದಿದೆ.
ಈ ಘಟನೆ ಬೆಳಕಿಗೆ ಬಂದ ನಂತರ ಎಸ್ಎಎಫ್ನ 2 ಮತ್ತು 5 ನೇ ಬೆಟಾಲಿಯನ್ನ ಕಮಾಂಡೆಂಟ್ಗಳು ತಮ್ಮ ಕಂಪನಿಯ ಕಮಾಂಡರ್ಗಳನ್ನು ಅಮಾನತುಗೊಳಿಸಿದ್ದಾರೆ ಎಂದು ಮೊರೆನಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಗೋಪಾಲ್ ಧಕಡ್ ತಿಳಿಸಿದ್ದಾರೆ.
ಶಸ್ತ್ರಾಗಾರದ ಗಾರ್ಡ್ಗಳು ಕಳ್ಳತನದ ಬಗ್ಗೆ ಪೊಲೀಸ್ ಲೈನ್ಗಳ ಮೀಸಲು ನಿರೀಕ್ಷಕರಿಗೆ ಮಾಹಿತಿ ನೀಡಿದ ನಂತರ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ ಎಂದು ಅಧಿಕಾರಿ ಹೇಳಿದರು.
ಎಸ್ಎಎಫ್ನ ಎರಡು ಶಸ್ತ್ರಾಸ್ತ್ರಗಳಿಂದ ಪಿಸ್ತೂಲ್ಗಳನ್ನು ಕಳವು ಮಾಡಲಾಗಿದೆ ಎಂಬ ಮಾಹಿತಿಯನ್ನು ಪೊಲೀಸ್ ಅಧಿಕಾರಿಗಳು ನಿರಾಕರಿಸಿದ್ದಾರೆ. ಘಟನೆ ಬೆನ್ನಲ್ಲೇ ಚಂಬಲ್ ವಲಯ ಪೊಲೀಸ್ ಮಹಾನಿರೀಕ್ಷಕ ಸುಶಾಂತ್ ಸಕ್ಸೇನಾ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಪದೇ ಪದೇ ಪ್ರಯತ್ನಿಸಿದರೂ, ಐಜಿ ಸಕ್ಸೇನಾ ಫೋನ್ನಲ್ಲಿ ಸಂಪಕಕ್ಕೆ ಸಿಕ್ಕಿಲ್ಲ ಎಂಬ ಮಾಹಿತಿಯನ್ನು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.