ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಮುಗಿದೊಡನೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (Pಅಃ) ಪಾಕಿಸ್ತಾನ ಸೂಪರ್ ಲೀಗ್ ಅನ್ನು ನಡೆಸಲಿದೆ. ಇದಕ್ಕ ಜನವರಿ 12ರಂದು ಹರಾಜು ಪ್ರಕ್ರಿಯೆಗಳು ನಡೆದಿದ್ದು ಬಾಂಗ್ಲಾದೇಶದ ಬೌಲರ್ ಮುಸ್ತಫಿಝುಲ್ ರೆಹಮಾನ್ ಅವರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದಾರೆ.
ಇದೀಗ 2025ರ ಐಪಿಎಲ್ ಸೀಸನ್ ಗೆ ಪೂರ್ವಭಾವಿಯಾಗಿ ಕಳೆದ ನವೆಂಬರ್ ನಲ್ಲಿ ನಡೆದ ಹರಾಜು ಪ್ರಕ್ರಿಯೆಗೆ ಪೂರ್ವಭಾವಿಯಾಗಿ ಚೆನ್ನೈ ಸೂಪರ್ ಕಿಂಗ್ ಫ್ರಾಂಚೈಸಿಯು ಬಾಂಗ್ಲಾದೇಶದ ಎಡಗೈ ವೇಗದ ಬೌಲರ್ ಮುಸ್ಪಫಿಝುರ್ ರೆಹಮಾನ್ ಅವರನ್ನು ರಿಲೀಸ್ ಮಾಡಿತ್ತು. ಹರಾಜು ಪ್ರಕ್ರಿಯೆಯಲ್ಲಿ ಅವರನ್ನು ಯಾವ ಫ್ರಾಂಚೈಸಿಯೂ ಖರೀದಿಸಿರಲಿಲ್ಲ.
ಇದೀಗ ಅವರು ಪಾಕಿಸ್ತಾನ ಸೂಪರ್ ಲೀಗ್ ನ ಹರಾಜಿನಲ್ಲಿ ಹೆಸರು ನೋಂದಾಯಿಸಿದ್ದು, ಯಾವುದಾದರೂ ಫ್ರಾಂಚೈಸಿ ಖರೀದಿಸಿದಲ್ಲಿ 7 ವರ್ಷಗಳ ಬಳಿಕ ಪಿಎಸ್ ಎಲ್ ಆಡಲಿದ್ದಾರೆ. ಬಾಂಗ್ಲಾದೇಶದ ವೇಗಿ 2018ರಲ್ಲಿ ಲಾಹೋರ್ ಕ್ವಾಲ್ಯಾಂಡರ್ಸ್ ಪರ ಆಡಿದ್ದರು.