ನ್ಯೂಯಾರ್ಕ್: ಅಮೆರಿಕಾದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಆಪ್ತ ಕಾಶ್ ಪಟೇಲ್ ಅವರನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ನ ನಿರ್ದೇಶಕರ ಪ್ರಬಲ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದ್ದಾರೆ.
ಕಶ್ಯಪ್ ‘ಕಾಶ್’ ಪಟೇಲ್ ಅವರು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ನ ಮುಂದಿನ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಘೋಷಿಸಲು ನನಗೆ ಹೆಮ್ಮೆಯಾಗುತ್ತಿದೆ. ಕಾಶ್ ಒಬ್ಬ ಅದ್ಭುತ ವಕೀಲ, ತನಿಖಾಧಿಕಾರಿ ಮತ್ತು ‘ಅಮೆರಿಕಾ ಫಸ್ಟ್’ ಹೋರಾಟಗಾರ, ಭ್ರಷ್ಟಾಚಾರವನ್ನು ಬಹಿರಂಗಪಡಿಸಲು, ನ್ಯಾಯವನ್ನು ರಕ್ಷಿಸುವಲ್ಲಿ ಅವರು ವೃತ್ತಿಜೀವನ ಕಳೆದಿದ್ದಾರೆ.
ಈಗ ಅಮೆರಿಕಾದ ಜನರನ್ನು ರಕ್ಷಿಸುವುದು ನಮಗೆ ಮುಖ್ಯವಾಗಿದೆ ಎಂದು ಟ್ರಂಪ್ ಅವರ ಮಾಲೀಕತ್ವದ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರೂತ್ ಸೋಷಿಯಲ್ನಲ್ಲಿ ಘೋಷಿಸಿದ್ದಾರೆ.