ಶಿಮ್ಲಾ: “ಮೊದಲು ದೇಶ, ನಂತರ ಸಹೋದರನ ಮದುವೆ. ಹೀಗಾಗೇ ಪಂದ್ಯವಿದ್ದ ಕಾರಣ ನಾನು ಮದುವೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ” ಎಂಬುವುದು ಸ್ಟಾರ್ ಕ್ರಿಕೆಟರ್ ಮಾತು. ಹೌದು ಭಾರತ ಕ್ರಿಕೆಟ್ ತಂಡದ ಸ್ಟಾರ್ ಬೌಲರ್ ರೇಣುಕಾ ಸಿಂಗ್ ಅವರು ಏಷ್ಯಾ ಕಪ್-2024 ರಲ್ಲಿ ಭಾರತ-ಪಾಕಿಸ್ತಾನ ಪಂದ್ಯಕ್ಕಾಗಿ ತನ್ನ ಸಹೋದರನ ಮದುವೆಗೇ ಗೈರಾಗಿದ್ದಾರೆ.
ಅವರು ತಮ್ಮ ತಾಯಿಯೊಂದಿಗೆ ದೂರವಾಣಿಯಲ್ಲಿ ಮಾತನಾಡುವಾಗ ಮೇಲಿನ ವಿಷಯಗಳನ್ನು ಹೇಳಿದರು.ಜುಲೈ 19 ರ ಸಂಜೆ ಹಿಮಾಚಲ ಪ್ರದೇಶದಲ್ಲಿ ಮಹಿಳಾ ಕ್ರಿಕೆಟಿಗ ರೇಣುಕಾ ಸಿಂಗ್ ಅವರ ಸಹೋದರನ ವಿವಾಹ ನೆರವೇರಿತು. ಆದರೆ, ಈ ಸಮಯದಲ್ಲಿ, ಪಾಕಿಸ್ತಾನ ವಿರುದ್ಧದ ಪಂದ್ಯದ ಕಾರಣ, ರೇಣುಕಾ ಸಿಂಗ್ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಮತ್ತು ವೀಡಿಯೊ ಕರೆಯಲ್ಲಿ ಮದುವೆಯ ವಿಧಿವಿಧಾನಗಳನ್ನು ವೀಕ್ಷಿಸಿದರು.
ಮಾಹಿತಿಯ ಪ್ರಕಾರ, ಸಹೋದರನ ಮದುವೆಯ ಸಮಯದಲ್ಲಿ, ರೇಣುಕಾ ಸಿಂಗ್ ವಿಡಿಯೋ ಕರೆಯಲ್ಲಿ ಮಾತನಾಡುತ್ತಾ ಮದುವೆಯ ವಿಧಿವಿಧಾನಗಳನ್ನು ವೀಕ್ಷಿಸಿದರು. ರೇಣುಕಾ ಸಿಂಗ್ ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯ ರೋಹ್ರು ಮೂಲದವರು ಮತ್ತು ಅವರು ಭಾರತ ತಂಡದ ಸ್ಟಾರ್ ಬೌಲರ್ ಎಂಬುವುದು ಉಲ್ಲೇಖನೀಯ.