ಬೆಂಗಳೂರು: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು ನಗರ ಜಿಲ್ಲೆಯ ಆಶ್ರಯದಲ್ಲಿ ದಿನಾಂಕ ೭-೧೧.೨೦೨೪ ರಂದು ಗುರುಕುಲ ಇಂಟರ್ ನ್ಯಾಷನಲ್ ಸ್ಕೂಲ್, ಮಾಗಡಿ ರಸ್ತೆ ಇಲ್ಲಿ ಸರ್ಸಿವಿ ರಾಮನ್ ಅವರ ಜನ್ಮದಿನಾಚರಣೆಯನ್ನು ಆಯೋಜಿಲಾಗಿತ್ತು .
ಪ್ರೊಫೆಸರ್ ಎಂ.ಆರ್.ನಾಗರಾಜ್ ಅವರು ಸಿವಿ ರಾಮನ್ ಅವರ “ವಿಜ್ಞಾನದ ಬೆರಗು” ವಿಷಯ ಕುರಿತು ಮಾತನಾಡಿದರು. ಅವರು ತಮ್ಮ ಉಪನ್ಯಾಸದಲ್ಲಿ ಹಲವು ಪ್ರಮುಖ ಘಟನೆಗಳನ್ನು ಪ್ರಸ್ತಾಪಿಸಿದರು.
ಅತ್ಯಂತ ಕಡಿಮೆ ಬೆಲೆಯ ಸ್ಥಳೀಯ ಸಲಕರಣೆಗಳನ್ನೇ ಬಳಿಸಿಕೊಂಡು ಅಂತರಾಷ್ಟ್ರೀಯ ನೋಬೆಲ್ ಪ್ರಶಸ್ತಿಗೆ ಭಾಜನರಾದ ಏಕೈಕ ನಮ್ಮ ಹೆಮ್ಮೆಯ ಭಾರತದ ವಿಜ್ಞಾನಿ ಸರ್.ಸಿ ವಿ ರಾಮನ್.
ಅವರು ಬೆಳಕು ಮತ್ತು ಧ್ವನಿ ಕುರಿತು ನೆಡೆಸಿದ ತಮ್ಮ ಆನೇಕ ಪ್ರಯೋಗಗಳನ್ನು ಯಾವುದೇ ಹೊರದೇಶಗಳಿಗೆ ಹೋಗಿ ಅಲ್ಲಿನ ಅತ್ಯಾಧುನಿಕ ಪ್ರಯೋಗ ಶಾಲೆಗಳಲ್ಲಿ ಮಾಡದೇ ನಮ್ಮ ದೇಶದಲ್ಲೇ ತಮ್ಮ ಕ್ರೀಯಾ ಶೀಲಾ ಪ್ರಯೋಗಗಳನ್ನು ನೆಡಸುವು ದರ ಮೂಲಕ ಯಶಸ್ಸನ್ನು ಕಂಡ ಜಗತ್ತಿನ ಶ್ರೇಷ್ಠ ವಿಜ್ಞಾನಿಯು ಹೌದು.
ರಾಮನ್ ರ ಈ ಅವಿಷ್ಕಾರಕ್ಕೆ “ರಾಮನ್ ಪರಿಣಾಮ” ಎಂದೇ ಪ್ರಸಿದ್ಧಿಯಾಯಿತು. ರಾಮನ್ ಪರಿಣಾಮ ಮಂಡಿಸಿದ ಹನ್ನೆರಡು ವರ್ಷಗಳ ಅವಧಿಯಲ್ಲಿ ವಿಶ್ವದ ಬೇರೆ ಬೇರೆ ದೇಶಗಳ ವಿಜ್ಞಾನಿಗಳು ಬರೆದ ೧೮೦೦ ಕ್ಕೂ ಪ್ರೌಡ ಪ್ರಭಂದಗಳುಪ್ರಕಟವಾದವು.
ಇವರ ಸಂಶೋಧನೆ ಸುಮಾರು ೨೮೦೦ ರಾಸಾಯನಿಕ ಸಂಯುಕ್ತಗಳ ರಚನೆಯನ್ನು ಅಭ್ಯಾಸಮಾಡಲು ನೆರವಾಯಿತು. ಸಿ.ವಿ ರಾಮನ್ ಅವರ ವಿಜ್ಞಾನದ ಅಮೋಘ ಸೇವೆಯನ್ನು ಗುರುತಿಸಿ ಘನ ಸರ್ಕಾರ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಿತು .ಭಾರತಕ್ಕೆ ನೋಬೆಲ್ ಪ್ರಶಸ್ತಿ ತಂದುಕೊಟ್ಟು ಜಗತ್ತಿಗೆ ಅರ್ಪಸಿದ ದಿನವನ್ನು “ರಾಷ್ಟ್ರೀಯ ವಿಜ್ಞಾನ ದಿನ” ವಾಗಿ ಕೇಂದ್ರಸರ್ಕಾರ ಘೋಷಿಸಿದೆ. ಕಾರ್ಯಕ್ರಮದಲ್ಲಿ ಕೆಜೆವಿಎಸ್ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷರಾದ ನಾ. ಶ್ರೀಧರ, ಶಾಲೆಯ ಸಂಸ್ಥಾಪಕ ರಾದ ನಂಜುಂಡಯ್ಯ, ಕಾರ್ಯದರ್ಶಿ ಎಂ.ಲಕ್ಷಿ÷್ಮ ನರಸಿಂಹ, ಶಾಲಾ ಮುಖ್ಯೋಪಧ್ಯಾರಾದ ಶ್ರೀ ಮೋಹನ್ , ಮುಂತಾದವರು ಹಾಜರಿದ್ದರು.
ಭಾರತ ರತ್ನ ಸರ್ ಸಿ.ವಿ.ರಾಮನ್ ಅವರ ಜನ್ಮ ದಿನಾಚರಣೆ
