ಚೆನ್ನೈ: ಮಧ್ಯಮ ವೇಗದ ಬೌಲರ್ ಪೂಜಾ ವಸ್ತ್ರಾಕರ್ (13ಕ್ಕೆ4) ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶಿಸಿದ ನಂತರ ಸ್ಮೃತಿ ಮಂದಾನ (54, 40ಎ, 4×8, 6×2) ಅವರು ಬಿರುಸಿನ ಅರ್ಧ ಶತಕ ಹೊಡೆದು ಭಾರತ ತಂಡ, ಕೊನೆಯ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 10 ವಿಕೆಟ್ಗಳ ಸುಲಭ ಜಯ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇದರೊಂದಿಗೆ ಮೂರು ಪಂದ್ಯಗಳ ಸರಣಿ ಮಂಗಳವಾರ 1-1ರಲ್ಲಿ ಸಮನಾಯಿತು. ಪೂಜಾ ಅವರಿಗೆ ಸೂಕ್ತ ಬೆಂಬಲ ನೀಡಿದ ಎಡಗೈ ಸ್ಪಿನ್ನರ್ ರಾಧಾ ಯಾದವ್ 6 ರನ್ನಿಗೆ 3 ವಿಕೆಟ್ ಪಡೆದರು.
ಸ್ಕೋರುಗಳು: ದಕ್ಷಿಣ ಆಫ್ರಿಕಾ ಮಹಿಳಾ ತಂಡ: 17.1 ಓವರುಗಳಲ್ಲಿ 84 (ತಾಜ್ಮಿನ್ ಬ್ರಿಟ್ಸ್ 20, ಮರೈಝನ್ ಕಾಪ್ 10, ಅನ್ನೇಕೆ ಬಾಷ್ 17; ಪೂಜಾ ವಸ್ತ್ರಾಕರ್ 13ಕ್ಕೆ4, ರಾಧಾ ಯಾದವ್ 6ಕ್ಕೆ3, ಅರುಂಧತಿ ರೆಡ್ಡಿ 14ಕ್ಕೆ1, ಶ್ರೇಯಾಂಕ ಪಾಟೀಲ 19ಕ್ಕೆ1, ದೀಪ್ತಿ ಶರ್ಮಾ 21ಕ್ಕೆ1);
ಭಾರತ ಮಹಿಳಾ ತಂಡ: 10.5 ಓವರುಗಳಲ್ಲಿ ವಿಕೆಟ್ ನಷ್ಟವಿಲ್ಲದೇ 88 (ಶಫಾಲಿ ವರ್ಮಾ ಔಟಾಗದೇ 27, ಸ್ಮೃತಿ ಮಂದಾನ ಔಟಾಗದೇ 54). ಪಂದ್ಯದ ಮತ್ತು ಸರಣಿಯ ಆಟಗಾರ್ತಿ: ಪೂಜಾ ವಸ್ತ್ರಾಕರ್.