ಬೆಂಗಳೂರು: ಬೆಂಗಳೂರಿನ ಸ್ಟ್ಯಾಂಡ್ ಫೋರ್ಡ್ ಕಾನೂನು ಶಾಲೆಯಲ್ಲಿ “ಸಂವಿಧಾನ ಹಾಗೂ ಮಾನವ ಹಕ್ಕುಗಳ” ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ ಡಾ. ಸಿ. ಬಸವರಾಜ್ ರವರು ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿ ಟಿ. ಜಿ. ಶಂಕರೇಗೌಡ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ಕೆ.ಬಿ. ಕೆಂಪೇಗೌಡರವರು ಪ್ರಾಸ್ತಾವಿಕ ನುಡಿಯನ್ನು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾನ ಸಂವೇದನಾ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ವೆಂಕಟೇಶ್ ಎ.ಎಂ. ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಖಜಾಂಜಿಗಳಾದ ಶ್ರೀ ರಾಘವೇಂದ್ರ ಎನ್.ಎಸ್. ಉಚ್ಚ ನ್ಯಾಯಾಲಯದ ವಕೀಲರಾದ ಡಾ. ಗಿರೀಶ್ ಕುಮಾರ್ ಆರ್. ಇಂಡೋಗ್ಲೋಬ್ ಅಧ್ಯಕ್ಷರಾದ ಟಿ. ಎಂ. ಗೌಡ, ಕಾರ್ಯದರ್ಶಿ ಸಂಗೀತ ಗೌಡ ,ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ನಿಮ್ಮಿ ವಿ .ಎಸ್. ಹಾಗೂ ಕಾರ್ಯಕ್ರಮದ ಸಂಯೋಜನಾಧಿಕಾರಿ ಶ್ರೀ ಸಾಯಿ ಶಂಕರ್ ಸಿಎಂ ಉಪಸ್ಥಿತರಿದ್ದರು.
ಪ್ರೊ ಸಿ. ಬಸವರಾಜುರವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಮಾತನಾಡುತ್ತಾ, ಭಾರತ ಸಂವಿಧಾನ ಅತ್ಯಂತ ಶ್ರೇಷ್ಠ ದಾಖಲಾತಿ. ಈ ಒಂದು ಪವಿತ್ರ ಸರ್ವೋಚ್ಚ ಕಾನೂನು, ದೇಶದ ಐಕ್ಯತೆ, ಭ್ರಾತೃತ್ವತೇ ತರುವುದಲ್ಲದೆ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವಲ್ಲಿ ಸಹಕಾರಿಯಾಗಿದೆ. ಭಾರತ ಸಂವಿಧಾನಕ್ಕೆ 75 ವರ್ಷಗಳ ಕಳೆದಿದ್ದರೂ ಇನ್ನೂ ಅಸ್ಪೃಶ್ಯತೆ ಹಾಗೂ ಆರ್ಥಿಕ ಪ್ರಜಾಪ್ರಭುತ್ವ ದೊರಕದಿರುವುದು ವಿಷಾದನೀಯ ಎಂದು ತಮ್ಮ ಭಾಷಣದಲ್ಲಿ ತಿಳಿಸಿದರು.
ನ್ಯಾಯಮೂರ್ತಿಗಳಾದ ಶಿವಶಂಕರೇ ಗೌಡರು ಮಾತನಾಡುತ್ತಾ ಭಾರತ ಸಂವಿಧಾನದಲ್ಲಿ ಮೊದಲು ಪ್ರಾರಂಭವಾಗುವ ಪ್ರಸ್ತಾವನೆಯಲ್ಲಿ ಮೂಲಭೂತ ಹಕ್ಕು ಹಾಗೂ ರಾಜ್ಯ ನೀತಿ ನಿರ್ದೇಶಕ ತತ್ವ ಗಳ ಬಗ್ಗೆ ತಿಳಿಸಲಾಗಿದೆ. ಇವೆರಡನ್ನು ಮಾನವ ಹಕ್ಕುಗಳು ಎಂದು ಗುರುತಿಸಿದ್ದು ,ಇವುಗಳ ಅನುಷ್ಠಾನ ಕ್ರಮಬದ್ಧವಾಗಿ ಹಾಗೂ ಪರಿಣಾಮಕಾರಿಯಾಗಿ ಸರ್ಕಾರಗಳು ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ. ಡಾ. ಸಿ. ಬಸವರಾಜ್ ರವರು ಉದ್ಘಾಟನೆ ನೆರೆವೇರಿಸುತ್ತಿರುವುದು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿ ಟಿ. ಜಿ. ಶಂಕರೇಗೌಡ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ಕೆ.ಬಿ. ಕೆಂಪೇಗೌಡರವರು ಪ್ರಾಸ್ತಾವಿಕ ನುಡಿಯನ್ನು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾನ ಸಂವೇದನಾ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ವೆಂಕಟೇಶ್ ಎ.ಎಂ. ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಖಜಾಂಜಿಗಳಾದ ಶ್ರೀ ರಾಘವೇಂದ್ರ ಎನ್.ಎಸ್. ಉಚ್ಚ ನ್ಯಾಯಾಲಯದ ವಕೀಲರಾದ ಡಾ. ಗಿರೀಶ್ ಕುಮಾರ್ ಆರ್. ಇಂಡೋಗ್ಲೋಬ್ ಅಧ್ಯಕ್ಷರಾದ ಟಿ. ಎಂ. ಗೌಡ, ಕಾರ್ಯದರ್ಶಿ ಸಂಗೀತ ಗೌಡ ,ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ನಿಮ್ಮಿ ವಿ .ಎಸ್. ಹಾಗೂ ಕಾರ್ಯಕ್ರಮದ ಸಂಯೋಜನಾಧಿಕಾರಿ ಶ್ರೀ ಸಾಯಿ ಶಂಕರ್ ಸಿಎಂ ಉಪಸ್ಥಿತರಿದ್ದರು.