ಬೆಂಗಳೂರು: ಕರ್ನಾಟಕ ಕೇವಲ ರಾಜ್ಯವಲ್ಲ. ಅದು ನಮ್ಮ ಸಂಸ್ಕೃತಿ. ಕನ್ನಡ ನಮ್ಮ ಭಾಷೆ ಮಾತ್ರವಲ್ಲದೇ ನಮ್ಮ ಸಂಪ್ರದಾಯವೂ ಆಗಿದೆ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷ ಡಾ. ವೈ.ಕೆ. ಮುದ್ದುಕೃಷ್ಣ ಹೇಳಿದ್ದಾರೆ.
ನಗರದ ಎಂಕೆಪಿಎಂಆರ್ವಿ ಇನ್ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ನ ಮಂಗಳ ಮಂಟಪದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು. ಭಾಷೆ ಬಗ್ಗೆ ಎಲ್ಲರೂ ಅಭಿಮಾನ ಬೆಳೆಸಿಕೊಳ್ಳಬೇಕು. ಭಾಷೆಯಿಂದ ನಾಡಾಭಿಮಾನವೂ ಬೆಳೆಯುತ್ತದೆ ಎಂದರು.
ರಾಜ್ಯ ಹೈಕೋರ್ಟ್ ನ ವಕೀಲರಾದ ಶ್ರವಣ ಪ್ರಭಾ ಮಾತನಾಡಿ, ನ್ಯಾಯಾಂಗ ವ್ಯವಸ್ಥೆಯಲ್ಲಿ ಕನ್ನಡ ಭಾಷೆ ಬಳಕೆ ಹೆಚ್ಚಾಗಬೇಕು. ಭಾಷೆ ಮಾತನಾಡುವುದರಿಂದ ಕನ್ನಡ ರಾಜ್ಯೋತ್ಸವಕ್ಕೆ ಮಹತ್ವ ದೊರೆಯುತ್ತದೆ ಎಂದರು. ಆರ್.ವಿ ಇನ್ಸ್ಟಿಟ್ಯೂಟ್ ಲೀಗಲ್ ಸ್ಟಡೀಸ್ ಸಂಸ್ಥೆಯ ಪ್ರಾಂಶುಪಾಲ ಪ್ರೊ . ಅಂಜಿನ ರೆಡ್ಡಿ ಮತ್ತಿತರೆ ಗಣ್ಯತರು ಪಾಲ್ಗೊಂಡಿದ್ದರು.