ಬೆಂಗಳೂರು: ಇತ್ತೀಚೆಗೆ ಮುಡಾ ಅಕ್ರಮದ ವಿಚಾರ ವಿರುದ್ಧ ಬಿಜೆಪಿ -ಜೆಡಿಎಸ್ ನಾಯಕರ ಪಾದಯಾತ್ರೆಯಲ್ಲಿ ಭಾಗಿಯಾಗದ ನಾಯಕರ ವಿರುದ್ಧ ಹೈಕಮಾಂಡ್ ನಾಯಕರಿಗೆ ದೂರು ನೀಡಲು ರಾಜ್ಯ ಬಿಜೆಪಿ ಘಟಕ ಮುಂದಾಗಿದೆ.ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ದೂರು ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಆಗಸ್ಟ್ 3 ರಿಂದ ಆಗಸ್ಟ್ 10 ರವರೆಗೂ ನಡೆದ ಮೈಸೂರು ಚಲೋ ಪಾದಯಾತ್ರೆಯಲ್ಲಿ ಭಾಗಿಯಾಗದ ನಾಯಕರ ವಿರುದ್ಧ ಬಿ.ವೈ. ವಿಜಯೇಂದ್ರ ಅಸಮಾಧಾನಗೊಂಡಿದ್ದು ಭಾಗವಹಿಸದವರ ವಿರುದ್ಧ ಕಾರ್ಯಕ್ರಮದ ನಡುವೆ ಇದನ್ನೆಲ್ಲಾ ಯೋಚಿಸುವುದು, ಮಾತನ್ನಾಡುವುದು ಸೂಕ್ತವಲ್ಲ.
ಈಗ ಪಾದಯಾತ್ರೆ ಮುಕ್ತಾಯವಾಗಿದೆ ಯಶಸ್ವಿಯಾಗಿದೆ.
ಈಗ ಸರ್ಕಾರದ ಮೇಲೆ ಒತ್ತಡವು ಕೂಡ ಇದೆ. ಬಿಜೆಪಿ-ಜೆಡಿಎಸ್ ನಾಯಕರು ಒಟ್ಟೊಟ್ಟಿಗೆ ಹೆಜ್ಜೆ ಹಾಕಿದ್ದೇವೆ.ಆದ್ರೆ, ನಮ್ಮ ಪಕ್ಷದ ಅನೇಕರು ಕೈ ಕೊಟ್ಟಿದ್ದಾರೆ. ಇದು ಏಕೆ? ಇವರ ವಿರುದ್ಧ ಹೈಕಮಾಂಡ್ ನಾಯಕರ ಗಮನ ಸೆಳೆಯಲೇಬೇಕು ಎಂಬ ನಿಲುವು ತಾಳಿದ್ದಾರೆ.ಈ ನಿಟ್ಟಿನಲ್ಲಿ ಹೈಕಮಾಂಡ್ ನಾಯಕರ ಅಂಗಳಕ್ಕೆ ಆ ನಾಯಕರ ಹೆಸರನ್ನು ಕಳುಹಿಸಬೇಕೆಂದು ನಿರ್ಧರಿಸಿರುವ ವಿಜಯೇಂದ್ರ. ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ ಹೆಸರುಗಳನ್ನು ಹೈಕಮಾಂಡ್ ನಾಯಕರ ಗಮನಕ್ಕೆ ತರಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.