ಬೆಂಗಳೂರು: ನಂಬಿಕೆ, ಗುಣಮಟ್ಟ ಮತ್ತು ಕರಕುಶಲತೆಗೆ ಹೆಸರಾಗಿರುವ ಭೀಮ ಸಂಸ್ಥೆಯು ಮದುವೆಯ ಸೀಸನ್ ಆರಂಭವಾಗುತ್ತಿರುವುದರಿಂದ, ಅದಕ್ಕೆ ಪೂರಕವಾಗಿ ‘ಭೀಮ ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಫೆಸ್ಟಿವಲ್’ ಅನ್ನು ಆಯೋಜಿಸುತ್ತಿದೆ. ಡಿಸೆಂಬರ್ 9 ರಂದು ಆರಂಭಗೊಳ್ಳಲಿರುವ ಈ ವಜ್ರಾಭರಣಗಳ ಉತ್ಸವವು ಜನವರಿ 5, 2025 ರವರೆಗೆ ನಡೆಯಲಿದೆ.
ಈ ಉತ್ಸವದಲ್ಲಿ ಪಾಲ್ಗೊಳ್ಳಲು ಭೀಮ ಸಂಸ್ಥೆಯು ಗ್ರಾಹಕರನ್ನು ಆಹ್ವಾನಿಸುತ್ತದೆ. ವಜ್ರಾಭರಣಗಳ ಸೌಂದರ್ಯವನ್ನು ಮೆಚ್ಚಿ ಮನಸೋಲುವ ಗ್ರಾಹಕರು, ವಿಶೇಷವಾಗಿ ಈ ಸಂದರ್ಭದಲ್ಲಿ ವಜ್ರಾಭರಣಗಳ ಮೇಲೆ ಸಾಕಷ್ಟು ಕೊಡುಗೆಗಳನ್ನು ಪಡೆಯಬಹುದಾಗಿದೆ.ವಜ್ರಾಭರಣಗಳ ಖರೀದಿಯನ್ನು ಆನಂದಗೊಳಿಸಲು, ಪ್ರತೀ ಕ್ಯಾರೆಟ್ಗೆ ಫ್ಲಾಟ್ ರೂ.7,000 ವರೆಗಿನ ರಿಯಾಯಿತಿಯನ್ನು ಪಡೆಯಬಹುದು, ಮತ್ತು ಪ್ರತಿ ಕ್ಯಾರೆಟ್ ನೊಂದಿಗೆ 1-ಗ್ರಾಂ ಚಿನ್ನದ ನಾಣ್ಯವನ್ನು ಉಚಿತವಾಗಿ ಪಡೆಯಬಹುದಾಗಿದೆ,
ಹಾಗೂ ಹಳೆಯ ವಜ್ರಾಭರಣಗಳ ವಿನಿಮಯ/ ಚಿನ್ನಾಭರಣದ ಖರೀದಿಗಳೊಂದಿಗೆ, ಮೇಕಿಂಗ್ ಶುಲ್ಕದ ಮೇಲೆ ಹೆಚ್ಚುವರಿಯಾಗಿ 10% ಉಳಿಸುವ ಅವಕಾಶವನ್ನು ಒದಗಿಸುತ್ತದೆ. ಈ ಮೂಲಕ ಸುಂದರ ಹಾಗೂ ಆಕರ್ಷಕವಾದ ಆಭರಣಗಳನ್ನು ತಮ್ಮದಾಗಿಸಿಕೊಳ್ಳಲು ಪ್ರೇರೇಪಣೆ ಒದಗಿಸುತ್ತದೆ.ಮಹತ್ವಾಕಾಂಕ್ಷೆ, ಘನತೆ ಮತ್ತು ಕಾಲಾತೀತ ಸೌಂದರ್ಯದ ಸಂಕೇತವಾಗಿರುವ ವಜ್ರಾಭರಣಗಳನ್ನುಕೊಂಡು ಬದುಕಿನ ಮಹತ್ವದ ಕ್ಷಣಗಳನ್ನು ಸಂಭ್ರಮಿಸಲು ಈ ಕೊಡುಗೆಗಳು ಕಾರಣವಾಗುತ್ತವೆ.ಮಧುವೆಯ ತಯಾರಿಯಿಂದ ಹಿಡಿದು ಯಾವುದೇ ಸಂಭ್ರಮಾಚರಣೆ ಯಿರಲಿ ಅದಕ್ಕೆ ಸೂಕ್ತವಾಗುವ ಭಾವ ಮತ್ತು ಸಂದರ್ಭಕ್ಕೆ ಹೊಂದಿಕೊಳ್ಳುವ ವಿನ್ಯಾಸ ಹೊಂದಿರುವ ವಜ್ರಾಭರಣಗಳನ್ನು ಭೀಮ ಒದಗಿಸುತ್ತದೆ.