ಬೀಜಿಂಗ್: ಇಂದು ಮುಂಜಾನೆ ಪ್ರಬಲ ಭೂಕಂಪ ಸಂಭವಿಸಿ 53 ಮಂದಿ ಸಾವಿಗೀಡಾಗಿ 62 ಮಂದಿ ಗಾಯಗೊಂಡಿರುವ ಘಟನೆ ನೇಪಾಳ ಮತ್ತು ಟಿಬೆಟ್ ಗಡಿಯಲ್ಲಿ ಸಂಭವಿಸಿದೆ.
ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.1ರಷ್ಟು ಸಂಭವಿಸಿದೆ.
ಟಿಬೆಟ್ನಲ್ಲಿ ಭೂಕಂಪನ ಸಂಭವಿಸಿದರೂ ಚೀನಾ, ನೇಪಾಳ, ಉತ್ತರ ಭಾರತದ ಹಲವು ಭಾಗಗಳಲ್ಲಿ ಇದರ ಕಂಪನದ ಅನುಭವವಾಗಿದೆ.ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಭೂಕಂಪವು ಭಾರತೀಯ ಕಾಲಮಾನ ಬೆಳಿಗ್ಗೆ 6:35 ಕ್ಕೆ ಸಂಭವಿಸಿದೆ ಮತ್ತು ಟಿಬೆಟ್ನ ಕ್ಸಿಜಾಂಗ್ ಅದರ ಕೇಂದ್ರಬಿಂದುವಾಗಿದೆ.
ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಜನ ಮನೆಯಿಂದ ಹೊರಗಡೆ ಓಡಿಕೊಂಡು ಬಂದಿರುವ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಕಂಪನಕ್ಕೆ ಭಾರಿ ದೊಡ್ಡಗಾತ್ರದ ಕಟ್ಟಡಗಳು ಕುಸಿದುಬಿದ್ದಿದ್ದು, ರಸ್ತೆಗಳು ಬಿರುಕುಬಿಟ್ಟಿವೆ. ಕುಸಿದಿರುವ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಜನರು ಜನರು ಸಿಲುಕಿದ್ದಾರೆ ಎಂದು ಹೇಳಲಾಗಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.