ಬಾಗೇಪಲ್ಲಿ: ಪ್ರಾಥಮಿಕ ಸಹಕಾರಿ ಮತ್ತು ಗ್ರಾಮೀಣಾ ಅಭಿವೃದ್ದಿ ಬ್ಯಾಂಕ್ಗೆ ನಡೆದ ನಿರ್ದೇಶಕರ ಚುನಾವಣೆಯಲ್ಲಿ ಪಟ್ಟಣದ 9ನೇ ವಾರ್ಡಿನ ಪುರಸಭೆ ಸದಸ್ಯ ಬಿ.ಎ.ನರಸಿಂಹಮೂರ್ತಿ(ಎಸ್ಟಿಡಿ ಮೂರ್ತಿ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಿ.ಎ.ನರಸಿಂಹಮೂರ್ತಿ(ಎಸ್ಟಿಡಿ ಮೂರ್ತಿ) ಅವರು ಬಾಗೇಪಲ್ಲಿ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದು ತಮ್ಮ ವಿರುದ್ದ ಯಾರು ನಾಮ ಪತ್ರ ಸಲ್ಲಿಸದೆ ಇರುವುದರಿಂದ ಚುನಾವಣಾಧಿಕಾರಿ ಎಂ.ಪ್ರೇಮಕುಮಾರ್ ಅವರ ಅವಿರೋಧವಾಗಿ ಆಯ್ಕೆಯಾದರೆಂದು ಘೋಷಣೆ ಮಾಡಿದರು. ದಾನಿಗಳು ಆಗಿರುವ ಇವರು ಪಟ್ಟಣದ ಅನೇಕ ಬಡಬಗ್ಗರಿಗೆ ಆರ್ಥಿಕ ಸಹಾಯ ಜೊತೆಗೆ ಬಡವರ ಮದುವೆಗಳನ್ನು ಮಾಡಿ ಪಟ್ಟಣದಲ್ಲಿ ಹೆಸರು ವಾಸಿಯಾಗಿದ್ದಾರೆ.
ಉಳಿದಂತೆ ವಿ.ಪ್ರಭಾಕರರೆಡ್ಡಿ(ಸಾಲಗಾರರ ಸಾಮಾನ್ಯ ಕ್ಷೇತ್ರ ಕೊತ್ತಕೋಟೆ),ಬಿ.ನಾರಾಯಣರೆಡ್ಡಿ ಸಾಲಗಾರರ ಸಾಮಾನ್ಯ ಕ್ಷೆತ್ರ ದೇವರಗುಡಿಪಲ್ಲಿ), ಎಲ್.ಬೈರಾರೆಡ್ಡಿ ಸಾಲಗಾರರ ಸಾಮಾನ್ಯ ಕ್ಷೇತ್ರ ಮಿಟ್ಟೆಮರಿ), ಜಿ.ಬೈಯಪ್ಪ ಸಾಲಗಾರರ ಪ್ರವರ್ಗ ಎಜಿ ಮದ್ದೇಪಲ್ಲಿ ಕ್ಷೇತ್ರ), ಕೆ.ಆರ್.ಆಂಜನಪ್ಪ ಸಾಲಗಾರರ ಪ್ರವರ್ಗ-ಬಿ ಘಂಟಂವಾರಿಪಲ್ಲಿ ಕ್ಷೇತ್ರ), ಎನ್.ವೆಂಕಟರವಣಪ್ಪ ಸಾಲಗಾರರ ಪರಿಶಿಷ್ಟ ಚೇಳೂರು ಕ್ಷೇತ್ರ), ಜಿ.ಆರ್.ಹರಿನಾಥ ಸಾಲಗಾರರ ಪರಿಶಿಷ್ಟ ಪಂಗಡ ಜೂಲಪಾಳ್ಯ ಕ್ಷೇತ್ರ), ನಾಗರತ್ನಮ್ಮ ಸಾಲಗಾರರ ಮಹಿಳಾ ಮೀಸಲು ಕ್ಷೇತ್ರ ಗೂಳೂರು), ವೆಂಕಟಲಕ್ಷ್ಮಮ್ಮ ಸಾಲಗಾರರ ಮಹಿಳಾ ಮೀಸಲು ಕ್ಷೇತ್ರ ಪಾತಪಾಳ್ಯ), ಶ್ರೀನಿವಾಸರೆಡ್ಡಿ ಸಾಲಗಾರರಲ್ಲದ ಕ್ಷೇತ್ರ ಬಾಗೇಪಲ್ಲಿ.